STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Abstract Classics Inspirational

4  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Abstract Classics Inspirational

ಕೃಷ್ಣನ‌ ಹಾಡು

ಕೃಷ್ಣನ‌ ಹಾಡು

1 min
413


ಬಾರೋ ರಂಗಯ್ಯ ಓಡಿ ಬಾರೋ

ನೀಲ ಮೇಘಶ್ಯಾಮಾ ಬಾರೋ/ಪ


ಕೃಷ್ಣೆಗೆ ವಸನ ಕರುಣಿಸಿದ ಕರುಣಿಯೇ ಬಾರೋ

ತಾಪವ ಕಳೆಯುವ ಕೃಷ್ಣನೇ ಬಾರೋ

ಬಾರೋ.......ಬಾರೋ


ಧರೆಯ ಖುಲ್ಲರನ್ನು ಭಂಜಿಸಿದ ಖಲ್ಲರರಿಯೇ ಬಾರೋ

ಸುಜನರ ಪಾಲಿನ ಮಲ್ಲಾರಿಯೇ ಬಾರೋ

ಬಾರೋ.......ಬಾರೋ


ಬಂಧನ ಬಿಡಿಸುವ ಮೋಚಕದಾಯಕನೇ ಬಾರೋ

ಭಕ್ತರ ಪೊರೆಯುವ ಲೋಕನಾಯಕನೇ ಬಾರೋ

ಬಾರೋ......ಬಾರೋ


ಆನಂದಪೂರ್ಣ ಸರ್ವವ್ಯಾಪನೇ ಬಾರೋ

ಎಲ್ಲರ  ಸಲಹುವ ಪ್ರಿಯಕೃಷ್ಣನೇ

ಬಾರೋ........ಬಾರೋ 




ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract