STORYMIRROR

Gireesh pm Giree

Inspirational

2  

Gireesh pm Giree

Inspirational

ಕರಾಳ ದಿನ

ಕರಾಳ ದಿನ

1 min
114

ವೀರ ಶೌರ್ಯ ಸಾಹಸದ ಪ್ರತಿರೂಪ

ಶಾಂತಿ ಕ್ರಾಂತಿಗೂ ಸೈ ನಮ್ಮ ಈ ಭೂಪ

ನಿಮ್ಮ ಸಾಧನೆಯ ಹೊಗಳಲು ಪದಗಳೇ ಸಾಲದು

ನಮ್ಮ ದೇಶ ಕಾಯುವ ನಿಮ್ಮಯ ಸೇವೆ ಅಪಾರವಾದುದು


ಗಡಿಯಲ್ಲಿ ಕೀರ್ತಿಪತಾಕೆ ಹಾರಿಸಿದ ಗರಿಮೆ

ಭಾರತಮಾತೆಯ ನಿತ್ಯ ಪೊರೆಯೋ ಹಿರಿಮೆ

ಹಿರಿಮೆ ಗರಿಮೆಗಳ ಪಾತ್ರಕ್ಕೆ ನಿಮ್ಮ ತ್ಯಾಗ ಬಲಿದಾನ

ನಿಮ್ಮ ಸಾಧನೆಗೆ ನಮ್ಮ ಧನ್ಯತೆಯ ನಮ್ರತೆಯ ನಮನ


ದೇಶದ್ರೋಹಿಗಳ ಕುತಂತ್ರಕ್ಕೆ ಬಲಿಯಾಯಿತು ನಲುವತ್ತು ಜೀವ

ದೇಶದಲ್ಲೆಡೆ ಆವರಿಸಿತು ಮರೆಯಲಾರದ ನೋವ

ದೇಶದ ಉದ್ದಗಲಕ್ಕೂ ಬಹುಬೇಗನೆ ಹರಡಿತು ಸೂತಕದ ಛಾಯೆ

ಯೋಧರಿಗೆ ಅಪಾರ ನಿಮ್ಮದು ಅಪಾರ ನಿಮ್ಮ ಮಾಯೆ


Rate this content
Log in

Similar kannada poem from Inspirational