ಕನಸು ಕರಗಿದಾಗ
ಕನಸು ಕರಗಿದಾಗ


ನೀ ,
ಕೊಟ್ಟಿದ್ದನ್ನೇ ನಾ
ನಿನಗೆ ಹೇಗೆ ಕೊಡಲಿ ....?
ಅಂತಲೇ
ಪ್ರೀತಿ ಕೊಡಲಿಲ್ಲ .....
ಹೃದಯದ ಬಾಗಿಲು
ತೆರೆದು ಇಟ್ಟಿದ್ದಿಯಂತೆ ನೀನು
ಒಳಗೆ ಕರೆಯದಿದ್ದರೂ ಪರವಾಗಿಲ್ಲ
ಹೊರಗೆ ಬೆಳದಿಂಗಳಿದೆ
ರಂಗೋಲಿ ಹಾಕಲು
ಹೇಳಲಾರದೆ ಹಾಗೇ ಉಳಿದ
ನೂರಾರು ಮಾತುಗಳಿವೆ ಅಲ್ಲಿ
ಸ್ಪೋಟವಾಗುವ ಮೊ
ದಲು
ಕೊಟ್ಟುಬಿಡು ಹೃದಯ
ಸುಮ್ಮನೆ ಬರೆಯಲಿಲ್ಲ ನಾನು
ಅಳಿಸಲ್ಲ ನಿನ್ನ ನೆನಪುಗಳು
ಬರೆದೂ ,ಬರೆದೂ ಖಾಲಿಯಾಗಿವೆ
ಬರಲಾರೆಯಾ ಮತ್ತೊಮ್ಮೆ ಕನಸಿನಲಿ ......?
ನಿನ್ನ ಪ್ರೀತಿಯ ನೆನಪುಗಳು
ಈ ವಸಂತದಲಿ ಚಿಗುರಿ
ಚಿಗುರಿ ಬೆಳೆದು ಮರವಾಗಿರುವಾಗ
ನೀ ,
ಸಿಗದಿದ್ದರೇನಂತೆ
ನನಗೆ ಅದರ
ನೆರಳೇ ಸಾಕು .....!!