STORYMIRROR

Shridevi Patil

Inspirational Others Children

3  

Shridevi Patil

Inspirational Others Children

ಕಂದನ ಮೊದಲ ಹೀರೊ

ಕಂದನ ಮೊದಲ ಹೀರೊ

1 min
195

ಮೊದಲ ಸ್ಪರ್ಶದಲ್ಲೇ ಕಂದನ 

ಸೂಪರ್ ಹೀರೊ ಆಗಿ

ಮೊದಲ ಮುತ್ತು ನೀಡಿ

ಪ್ರೀತಿಯ ಧಾರೆ ಎರೆದು

ಹೆಗಲ ಮೇಲೆ ಹೊತ್ತು

ಕೂಸುಮರಿ ಆಡಿಸಿ

ಕಿರುಬೆರಳ ಬಿಗಿದಪ್ಪಿದಾಗ

ಜೊತೆಯಲಿ ನಾನಿರುವೆ ಎಂಬ

ಆತ್ಮಸ್ಥೈರ್ಯವ ತುಂಬಿ

ಕಂದನ ಪ್ರತಿಹೆಜ್ಜೆಯಲ್ಲೂ

ತಮ್ಮ ನೆರಳಿನ ಛಾಪನ್ನು ಒತ್ತಿ

ಕಂದನ ಯಶಸ್ಸಿನ ರೂವಾರಿಯಾಗಿರುವ

ಪ್ರತಿಯೊಬ್ಬ ಅಪ್ಪನಿಗೂ ನಮನಗಳು.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational