ಕಲಾಂ
ಕಲಾಂ


ಭಾರತೀಯರ ಪ್ರೀತಿಯ ಕಲಾಂ
ನಿಮಗೆ ಅಂತರಾಳದ ಸಲಾಂ
ಸಾಧನೆಯ ಮಹಾ ಶಿಖರ ಏರಿದವರು
ಸಹಸ್ರ ಭಾರತೀಯರ ಮನವ ಗೆದ್ದವರು
ಸರಳ ನಡಿಗೆಗೆ ಇನ್ನೊಂದು ಉತ್ತರ
ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ
ಕನಸ್ಸು ಮಾತ್ರ ಕಾಣದ ಸರದಾರ
ಕನಸ್ಸ ನನಸು ಮಾಡಿದ ಛಲಗಾರ
ಸ್ಪೂರ್ತಿದಾಯಕ ಮಾತಿನ ಮೂಲಕ
ಎಲ್ಲರಿಗೂ ಸ್ಪೂರ್ತಿ ತುಂಬಿದ ನಾಯಕ
ನಗುವೆಂದೂ ಇತ್ತು ನಿಮ್ಮ ಮೊಗದಲಿ
ಅದೀಗ ಐಕ್ಯವಾಗಿದೆ ಈ ನಿಮ್ಮ ಜಗದಲಿ
ಮರಳಿ ಬನ್ನಿ ತಾಯಿನಾಡಿಗೆ ಮರಳಿ ಬನ್ನಿ ಈ ಬೀಡಿಗೆ
ಭಾರತಾಂಬೆಯ ಕೀರ್ತಿ ಪತಾಕೆ ಹಾರಿಸಲು
ಅದನು ಮುಗಿಲ ತನಕ ಏರಿಸಲು