STORYMIRROR

Vijaya Bharathi

Abstract Action Inspirational

2  

Vijaya Bharathi

Abstract Action Inspirational

ಕಿಟಕಿ

ಕಿಟಕಿ

1 min
85

ಮನೆಮನೆಗೆ ಇರಬೇಕು

ಅಂದ ಚೆಂದದ ಕಿಟಕಿ

ಮುಂಜಾನೆ ಬೆಳಕು ತೂರಿ

ಸುಪ್ರಭಾತ ಹೇಳುವ ಕಿಟಕಿ


ಹೊರಗಿನ ಗಾಳಿ ಬೆಳಕುಗಳ

ಒಳಗೆ ಹರಿಸುವ ಕಿಟಕಿ

ನೀಲಾಗಸವ ಮುದದಿ

ತೋರುವ ಕಿಟಕಿ


ಮನೆಮನೆಯ ಕಥೆಗಳನು

ಕಾಣುವುದು ಕಿಟಕಿ

ಸೂರ್ಯೋದಯಾಸ್ತಗಳ

ಸಾರುವುದು ಕಿಟಕಿ


ಹಾದಿಬೀದಿಯ ಹರಟೆಯ

ಕೇಳುವುದು ಕಿಟಕಿ

ನೆರೆಮನೆಯ ಗುಟ್ಟುಗಳ

ರಟ್ಟು ಮಾಡುವ ಕಿಟಕಿ


ಮನುಜನಳಿದು ಹೋದರೂ

ಮನೆ ಮನೆಯ ಸಾಕ್ಷಿ ಕಿಟಕಿ

ಅರಮನೆಯ ಶತ್ರು ಧಾಳಿಯ

ತಿಳಿವ ಗೂಢಚಾರ ಕಿಟಕಿ

ಕಳ್ಳಕಾಕರ ಆಪ್ತಮಿತ್ರ

ಕಳ್ಳಗಂದಿ ಈ ಕಿಟಕಿ 


Rate this content
Log in

Similar kannada poem from Abstract