ಕೆಂಪಾದವೋ ಎಲ್ಲಾ ಕೆಂಪಾದವೋ
ಕೆಂಪಾದವೋ ಎಲ್ಲಾ ಕೆಂಪಾದವೋ
ಕೆಂಪಾದವೋ ಎಲ್ಲಾ ಕೆಂಪಾದವೋ...!
ರಕ್ತದ ಕೆಂಪು ಕಣ
ಜೀವದ್ರವ ಎಂದವೋ....
ಬಾನಿನ ಕೆಂಪು
ಸೃಷ್ಟಿಯ ಸೊಬಗೆಂದವೋ....
ನಲ್ಲೆಯ ಕೆನ್ನೆಯ ಕೆಂಪು
ನಾಚಿಕೆಯ ಹಿಗ್ಗೆಂದವೋ.....
ಮಣ್ಣಿನ ಫಲವತ್ತತೆಯ ಕೆಂಪು
ಜೀವಕಣದ ಹಿಡಿತವೆಂದವೋ...
ಹಣೆಯ ಕುಂಕುಮದ ಕೆಂಪು
ಹೆಣ್ಣ ಮುತ್ತೈದೆಯೆಂದವೋ....!
ಅಂತೆಯೇ...
ಕೆಂಗಣ್ಣಿನ ನೋಟದ ಕೆಂಪು
ರೌದ್ರ ಭಯವೆಂದವೋ.....
ಸಂಚಾರಿ ದೀಪದ ಕೆಂಪು
ಅಪಾಯ ನಿಲ್ಲೆಂದವೋ.....
ಧ್ವಜದ ಬಣ್ಣದ ಕೆಂಪು
ಕ್ರಾಂತಿಯೆದ್ದಿದೆ ನೋಡೆಂದವೊ....
ಸೂಚನಾ ಫಲಕದ ಕೆಂಪು
ಇಲ್ಲಿದೆ ಅಪಾಯವೆಂದವೋ......
ಕೆಂಡದ ಸುಡುವ ಕೆಂಪು
ಭಸ್ಮವಾಗುವುದೆಂದವೋ.....
ಬಣ್ಣ ಒಂದೇ ಕೆಂಪು......!
ಭಾವನೆ ಬೇರೆ ಬೇರೆಯಾದವೋ.....!
ಕೆಂಪಿರುವ ಕಡೆ ನೋಡುವಂತೆಲ್ಲಾ
ಅರಿತಂತೆ ಅರ್ಥವಾದವೋ......!
ಕೆಂಪಾದವೋ.... ಎಲ್ಲಾ ಕೆಂಪಾದವೋ....!
