ಕಾಡುವ ಪರಿ
ಕಾಡುವ ಪರಿ
ಹೇಳದೆ ಹೃದಯವ ಕದ್ದ ಕಳ್ಳ,
ನಿನ್ನ ಧ್ಯಾನದಲ್ಲಿ ಹೃದಯ ತಪ್ಪುತಿದೆ ತಾಳ.
ಪ್ರತಿ ರಾತ್ರಿ ನಿದಿರೆಯಲ್ಲೂ ಬೆಂಬಿಡದೆ ಕಾಡುವ ಮಾಯಗಾರ,
ತನು ಮನವೆಲ್ಲ ಆವರಿಸಿರುವ ಚೋರ.
ಅರೆ ಘಳಿಗೆಯೂ ನಿನ್ನ ಬಿಟ್ಟು ಬೇರೆ ಯೋಚನೆಯಿಲ್ಲ,
ನಿನ್ನ ಗುಂಗಲ್ಲೇ ವ್ಯಸ್ತವಾಗಿಸಿ ಬೇರೆಲ್ಲ ಕೆಲಸಗಳಿಗೆ ವಿರಾಮ ಇಡಿಸಿಬಿಟ್ಟೆಯಲ್ಲ.
ಜಗತ್ತಿನಲ್ಲಿನ ಯಾವ ಖುಷಿಯು ಬೇಕಿಲ್ಲ,
ನೀನು ಜೊತೆ ಇದ್ದಾಗ ಇರುವ ಖುಷಿ ಜಗತ್ತೇಲ್ಲ ಹುಡುಕಿದರೂ ಸಿಗುವುದಿಲ್ಲ.
ಎಲ್ಲ ತರಹದ ನೋವು, ಕಷ್ಟ ಸುಖವಾಗಿ ಸಹಿಸಬಲ್ಲೆ,
ನೀನು ಇಲ್ಲದ ನೋವು ಭಯಂಕರ ಏನಿಸುವುದು, ಕಲ್ಪನೆಯಲ್ಲೂ.
ಜೀವನದ ಕೊನೆವರೆಗೂ ನೀನು ಇದ್ದರೆ ನನ್ನ ಜೊತೆಯಲ್ಲಿ
ಈ ನೋವು, ಹಿತವಾದ ಯಾತನೆ ಅನುಭವಿಸ ಬಲ್ಲೆ ಎಲ್ಲ,

