ಜ್ಞಾನ ಭಂಡಾರ
ಜ್ಞಾನ ಭಂಡಾರ
ನನ್ನ ನೆಚ್ಚಿನ ಮಿತ್ರ
ನೀನೆಂದು ಇರುವೆ ಹತ್ರ
ನಿನ್ನ ಗೆಳೆತನ ಮಾಡಿ ಯಾರು ಕೆಟ್ಟಿಲ್ಲ
ನಿನ್ನ ಓದಿ ಯಾರು ಕೈ ಸುಟ್ಟಿಲ್ಲ
ನಿನ್ನ ಓದಲು ನನಗೊಂತರ ಉಲ್ಲಾಸ
ನೀನು ಜೊತೆಗಿರುವ ಪ್ರತಿದಿನ ಸಂತಸ
ಜ್ಞಾನಭಂಡಾರ ತುಂಬಿದ ಕಣಜ
ಪುಸ್ತಕ ಎಂದೂ ಜೊತೆಗಿರಲಿ ಮನುಜ
ನಿನ್ನ ಮೆಚ್ಚಿದ್ದಾರೆ ಎಷ್ಟು ನಾಯಕರು
ನಿನ್ನ ಒಪ್ಪಿದ್ದಾರೆ ಎಷ್ಟು ಮಹಾತ್ಮರು
ಓದಲು ತುಂಟ ಮಕ್ಕಳಿಗೂ ಕಷ್ಟ
ಆದರೂ ಅವರಿಗೆ ನೀನೇ ಇಷ್ಟ
ಬದುಕು ಬದಲಿಸಿದೆ ಪುಸ್ತಕವೆಂಬ ಹೆಸರು
ನಿನ್ನ ಓದಿ ಬಂಗಾರ ವಾದ ಬದುಕೇ ಸುಮಾರು
ಮನ ಪರಿವರ್ತನೆ ಮಾಡುವ ದಿವ್ಯಶಕ್ತಿ
ನಿನ್ನ ಓದಿ ವೃದ್ಧಿಯಾಗುವುದು ಯುಕ್ತಿ
ಇಳೆಯಲ್ಲಿ ಅಕ್ಷರಮಾಲೆ ಯಿಂದ ಹೊಳೆವ ಗ್ರಹ
ನೀನು ಭಾವನೆಗಳ ಮಧುರ ಸಂಗ್ರಹ
ಇನ್ನೂ ಹೆಚ್ಚು ಹೆಚ್ಚು ಓದುವ ಆಸೆ ಇದೆ
ನಿನ್ನ ಸಾರುವ ತಿಳಿಯುವ ಹಂಬಲ ಹೆಚ್ಚಿದೆ
