STORYMIRROR

Vijaya Bharathi

Abstract

2  

Vijaya Bharathi

Abstract

ಜನುಮ ದಿನ

ಜನುಮ ದಿನ

1 min
84

ಜನುಮ ತಳೆದವನಿಗುಂಟು

ಒಂದೊಂದು ಜನುಮ ದಿನ

ಕಾಲನ‌ ಸಮೀಪ ಸೂಚಿಪ ಮೂಲಮಾನ

ಹಗಲು ಇರುಳೆಂಬ ಕೊಳಗಗಳು

ಅಳೆಯುವುವು ಆಯುಷ್ಯಗಳ


ವರುಷ ಉರುಳಿ ವರುಷ ಮರಳುವುದು

ವರುಷ ವರುಷಗಳು ಕಳೆದು

ಆಯುಷ್ಯದಳತೆ ಏರುವುದು

ಕಳೆದ ವರುಷಗಳು ಮರಳಿಬಾರದು

ಗತದ ನೆನಪುಗಳೊಡನೆ


ಭವಿತವ್ಯದ ಭರವಸೆಗಳೊಡನೆ

ಸಾಗುವುದು ವರ್ತಮಾನದ ಪಯಣ

ಜನನ ಮರಣಗಳ ಪರಿಧಿಯಲಿ

ಬಾಲ್ಯ ಕೌಮಾರ್ಯ ಯೌವನ


ವಾರ್ಧಕ್ಯಗಳ ನಿರಂತರ ಪರಿಭ್ರಮಣ

ಈ ವರ್ತುಲವ ದಾಂಟುವುದಕೆ

ಅಂತರಂಗದ ಆತ್ಮಾವಲೋಕನ ಕೆ

ಏಕೈಕ ಸುದಿನ ಈ ಜನುಮದಿನ


Rate this content
Log in

Similar kannada poem from Abstract