ಜೀವನ ಜಂಜಾಟ
ಜೀವನ ಜಂಜಾಟ
ಜೀವನದ ಜಂಜಾಟದಲ್ಲಿ ಜಡ್ಡು ಹಿಡಿದಂತೆ ಆಗಿದೆ ಎಲ್ಲರ ಮನಸ್ಸು
ಜೊತೆಗೆ ದಿನದಿನಕ್ಕೂ ಏರುತಲಿದೆ ನಮ್ಮೀ ವಯಸ್ಸು..!
ಎಷ್ಟೇ ತಡೆಹಿಡಿದರೂ ಕಳೆಯುತ್ತಿದೆ ಎಲ್ಲರ ಆಯಸ್ಸು,
ಕಳೆಯುವ ಮುನ್ನ ಎಚ್ಚೆತ್ತು, ಬದುಕಿನ ಅರ್ಥವನ್ನು ನೀ ಗ್ರಹಿಸು..?
ಹಣ, ಹೆಸರು, ಆಸ್ತಿ, ಅಂತಸ್ತು ಇವಿಷ್ಟಿದ್ದರೆ,
ಬದುಕೇ ನಮ್ಮದು ಎಂದುಕೊಂಡಿದ್ದಾರೆ ಮೂಢರು..!
ಅದ ಬಿಟ್ಟು ವಿದ್ಯೆ, ಬುದ್ಧಿ, ಸತ್ಕಾರ್ಯ ಸನ್ಮಾರ್ಗದಿಂದ ಬದುಕನ್ನು ಗೆದ್ದಿದ್ದಾರೆ ಹಲವರು..!
ಜಂಜಾಟದಲ್ಲೇ ಜೀವನ ಮುಗಿಸುವ ಬದಲು, ಈ ಕ್ಷಣವೇ ನೀ ಎಚ್ಚೆತ್ತು, ಸುತ್ತಲೂ ಒಮ್ಮೆ ನೋಡು..!
