ಜಗದ ಸೃಷ್ಟಿಯೇ ವಿಸ್ಮಯ
ಜಗದ ಸೃಷ್ಟಿಯೇ ವಿಸ್ಮಯ
ನಿನ್ನನ್ನಂದು ಕಂಡಿದ್ದೇ ವಿಸ್ಮಯ
ನಾನಾಗಲೇ ನಿನ್ನಲಿ ತನ್ಮಯ
ಆಗಿಂದಾನೇ ಬದುಕಾಯ್ತು ಸುಖಮಯ
ವಿಸ್ಮಯದ ಒಲವೀಗ ಪ್ರೇಮಮಯ.
ವಿಸ್ಮಯಗೊಳಿಸಿತ್ತು ಗರ್ಭದಿ ತಾನಿದ್ದ
ಕಥೆಯ ಕಂದ ನುಡಿದಾಗ.
ವಿಸ್ಮಯಗೊಂಡಿದ್ದೆ ಪತಿಯೂ
ಮಗುವಿಗಾಗಿ ಚಡಪಡಿಸಿದಾಗ
ವಿಸ್ಮಯಗೊಂಡೆ ಮತ್ತೇ ಮತ್ತೇ
ಮಗು ನನ್ನನ್ನಷ್ಟೇ ಬಯಸಿದಾಗ
ವಿಸ್ಮಯಗೊಂಡೆ ಕೊನೆಗೊಮ್ಮೆ
ಬದಲಾದ ಶರೀರ ಕಂಡಾಗ
ಒಲವಿನ ಸಾಕ್ಷಾತ್ಕಾರಕ್ಕೂ ವಿಸ್ಮಯ
ಗೆಲುವಿನ ಚಮತ್ಕಾರವೂ ವಿಸ್ಮಯ
ಮಡಿಲಲ್ಲಿ ಮಲಗಿದ ಕಂದನ
ಮುಂಗುರುಳ ತೀಡುತ ತಿಳಿದೆ
ಜಗದ ಸೃಷ್ಟಿಯೇ ಅದ್ಭುತ ವಿಸ್ಮಯ.
