STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

4  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

ಜೈ ಕರ್ನಾಟಕ

ಜೈ ಕರ್ನಾಟಕ

1 min
324


ಕನ್ನಡ ಅಂದರೆ ಕುಣಿದಾಡುವ ಮನಸ್ಸು

ಕನ್ನಡ ಪದದಲಿ ಅರವಿನ ಸೊಗಸು

ಕನ್ನಡ ತಾಯಿಯ ಮಕ್ಕಳ ಮೆರೆಯಿಸು

ಎಲ್ಲರೂ ನನ್ನವರೆಂಬ ಭಾವದಿ ಇರಿಸು

ಗಂಧದ ನಾಡಲಿ ಚೆಂದದ ಬೀಡಲಿ

ಚಾಮುಂಡಿಯ ರಕ್ಷಣೆಯ ಅಭಯದಲಿ

ಕಾವೇರಿ ತಾಯಿಯ ಸಿಹಿಜೇನಿನ ಹಾಲಲಿ

ಕನ್ನಡ ಮಾತೆಯ ಅಪ್ಪುಗೆಯ ಮಡಿಲಲಿ

ಸಾರ್ಥಕ ಬದುಕು ಹುಟ್ಟಿದ ಜೀವಕೆ

ಶಾಂತಿ ಸಹನೆಯ ಭಾವೈಕ್ಯತೆ ಸಾರಕೆ

ಬಾರಿಸು ಕನ್ನಡ ಗಂಟೆಯ ನಾದಕೆ

ಮೊಳಗಲಿ ಜೈಭೇರಿ ದಶ ದಿಕ್ಕಿನಡೆಗೆ

ನಮ್ಮಯ ಕನ್ನಡ ಪ್ರೀತಿ ನೀರತವಿರಲಿ

ಹೃದಯ ಮಿಡಿತದಿ ಒಂದಾಗಿ ಬೆರೆಯಲಿ

ಅಂದರೆ ಬರೆದರೆ ಸಾಲದು ಕವಿಗಳಲಿ

ನಮ್ಮಯ ಕಾಯಕ ಬಡೆದೆಚ್ಚರಿಸುತಲಿ

ಭಾರತ ಮಾತೆಯ ಹೆಮ್ಮೆಯ ಮಕ್ಕಳು

ಕರ್ನಾಟಕ ಮಾತೆಯ ಪ್ರೀತಿಯ ಕಂದಗಳು

ಜ್ಞಾನಪೀಠ ಪಡೆದ ಅಷ್ಟ ಧೀರ ಮಣಿಗಳು

ಭಾರತ ರತ್ನ ಹೊಂದಿದ ವೀರ ಕಲಿಗಳು

ಭಾರತ ಪತಾಕೆಯ ನೇಯುವ ನೆಲವಿದು

ಧೀರ ವನಿತೆಯರ ರಕ್ಷಣೆಯ ತಾಣವಿದು

ಕೃಷ್ಣದೇವರಾಯ ವೈಭೋಗದ ರಾಜ್ಯವಿದು

ದಕ್ಷಿಣ ಭಾರತಕರ್ಮ ಧರ್ಮ ಭೂಮಿಯಿದು

ಸಹೋದರತೆ ಕಾಣುವ ಪರಭಾಷಿಗರ

ನೆಲೆಯನು ಕೊಟ್ಟಿದೆ ಬಂದವರಾ

ಕರುಣದಿ ನೋಡುವ ಕಣ್ಣುಗಳ

ತಡವಿದರೆ ಕಾರುವ ಕೆಂಗಣ್ಣುಗಳ

ಜೀವಕೆ ಉಸಿರಾಗಲಿ ಡಿಂ ಡಿಂ ಕನ್ನಡವಾ

ಶಾಂತಿ ಮಂತ್ರ ಜಪಿಸೋಣ ಅನುದಿನವಾ

ಉಳಿಸುತ ಬೆಳಿಸುತ ಕರ್ನಾಟಕವ

ಚಾಚೋಣ ಸ್ನೇಹದಿ ಭಾರತ ಹಸ್ತವಾ

       


Rate this content
Log in

Similar kannada poem from Classics