STORYMIRROR

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಜಾತ್ರೆ

ಜಾತ್ರೆ

1 min
383

ಸಂಕ್ರಾಂತಿ ಮುಗಿದುಚೈತ್ರದಲಿ ( ವಸಂತದಲಿ )

ದೇವರುಗಳಿಗೆಲ್ಲಾ ಸಾಲುಸಾಲಾಗಿ ಉತ್ಸವಗಳ ಸಂಭ್ರಮ !

ರಥೋತ್ಸವ , ಬ್ಯಾಂಡ್ ವಾದ್ಯನಂಬಿಕೆ ,

ಹರಕೆ , ದರ್ಶನ ಸೇವೆ ಇತ್ಯಾದಿಗಳು......


ಜಾತ್ರೆ ಹತ್ತಿರವಾದಂತೆ ಜನಗಳ ಗದ್ದಲಮಂತ್ರ

ಭಜನೆಗಳೊಂದಿಗೆ ಉರಿಯುವ ಎಣ್ಣೆ ದೀಪಗಳು

ಧೂಪ, ಕರ್ಪೂರಹೂ ಹಣ್ಣುಗಳ ವಾಸನೆ


ಪ್ರತಿ ಊರಲ್ಲೂ ತೇರುತೇರು

ಬೀದಿಗಳಲ್ಲಿ ತಳಿರು ತೋರಣ

ರಸ್ತೆಯ ಮೇಲೆಬಣ್ಣ ಬಣ್ಣದ ರಂಗೋಲಿ

ಗಿಜಿಬಿಜಿ ಜನ ನೂಕು ನುಗ್ಗಲು


ತೇರು ಎಳೆಯುವವರ ಹೋ... ಹೋ... ಹೋ...

ಕೋಲಾಹಲದ ನಡುವೆ ವಾದ್ಯಗಳ ಸದ್ದು

ಬದುಕಿನ ಬವಣೆ, ಮಡಿವಂತಿಕೆಗಳನ್ನೆ

ಲ್ಲಾತಾತ್ಕಾಲಿಕವಾಗಿ ಮರೆತು

ಹಣ್ಣುಕಾಯಿ ಹರಕೆ ಒಪ್ಪಿಸುವ

ಎಲ್ಲಾ ವರ್ಗದ ಭಕ್ತರ ಸರದಿ ಸಾಲು

ಝಗ ಝಗಿಸುವ ಸಾಲು ಸಾಲು

ಅಂಗಡಿಗಳು ತೇರು ಎಳೆಯುವ ಹಾದಿಯಲ್ಲಿ

ನಿತ್ಯ ನಿರಂತರದ ಜಾತ್ರೆಯಈ ಜೀವ ಜಾತ್ರೆಯಲಿ

ನಮ್ಮ ಹೆಜ್ಜೆ ಗುರುತುಗಳೂ ಇರುತ್ತವೆ ..



Rate this content
Log in

Similar kannada poem from Classics