STORYMIRROR

Vijaya Bharathi

Abstract Classics Others

2  

Vijaya Bharathi

Abstract Classics Others

ಇಂದ್ರಚಾಪ

ಇಂದ್ರಚಾಪ

1 min
113

ಬಿಸಿಲು ಮಳೆಯ ನಡುವಿನಲ್ಲಿ

ಮೋಡದ ನಾಡಿನ ಬಾಗಿಲಿನಲ್ಲಿ

ಸಪ್ತ ವರ್ಣಗಳ ಓಕುಳಿ ಚೆಲ್ಲಿ

ನಲಿಯುತ ಬರುವುದು ಕಾಮನಬಿಲ್ಲು

ರಂಗು ರಂಗಿನ ಆಸೆ ಕಾಮನಬಿಲ್ಲು


ಹೆದೆಯೇರಿಸಿ ನನ್ನೆದೆಯ ನೇರದಲ್ಲಿ

ಮುಂದೋಡುತ್ತಾ ಶರವೇಗದಲಿ

ಕೈಗೆಟುಕದ ಬಹು ಬಹು ದೂರದಲಿ

ಕೈ ಬೀಸಿ ಕರೆವೆ ಬಾನಂಗಳದಲ್ಲಿ

ನಿನ್ನ ಹಿಡಿದೇ ಬಿಡುವ ಆಸೆಯಲ್ಲಿ


ಓಡಿಯೇ ಓಡಿದೆ  ನಿನ್ನಾ ನೆರಳಿನಲ್ಲಿ

ನಿನ್ನ ಹಿಡಿಯಲಾಗದ ನಿರಾಶೆಯಲ್ಲಿ

ಸೋತೆ ನಿನ್ನ ಕಣ್ಣ ಮುಚ್ಚಾಲೆ ಯಲಿ

ಸಿಗಲಾರೆ ನೀ ನನಗೆ ಈ ಜೀವನದಲಿ?


ನಾ ನಿನ್ನ ಇಂದ್ರಚಾಪದ ಬೆರಗಿನಲ್ಲಿ

ಮರುಳಾದೆ ಅಂದ ಚಂದದದಾಟದಲಿ

ಆಸೆ ಗರಿಗಳಗೆದರಿಸುತ ತೋರುತಲ್ಲಲ್ಲಿ

ಆಟವಾಡಿಸುವೆ ನೀ ಕಣ್ಣಾ ಮುಚ್ಚಾಲೆ

ಓ ಬಿಸಿಲ್ಗುದುರೆ ಆಸೆ ಕಾಮನಬಿಲ್ಲೇ

ಎನಗೆ ನೀನೊಂದು ಮರೀಚಕೆಯಲ್ಲೇ


Rate this content
Log in

Similar kannada poem from Abstract