ಇದೋ ಬಂತು ಉತ್ಸವ..
ಇದೋ ಬಂತು ಉತ್ಸವ..
ಬಿಡುಗಡೆ ಬಿಡುಗಡೆ ಈ ದಿನ
ಸೆರಗಿನ ಕೆಂಡವ ಕೆಡಿಸಿದ ಸುದಿನ
ದಾಸ್ಯವು ತೊಲಗಿದ ಸಂತಸ ಕ್ಷಣ
ಕಳಚಿತು ಜೀತದ ಶಾಶ್ವತ ಬಂಧನ
ದೇಶವನುಳಿಸಲು ತೊಟ್ಟರು ಪಣ
ಭಕ್ತಿಯ ಶಕ್ತಿಯ ಮಿಳಿತದ ಸಂಧಾನ
!!ಬಿಡುಗಡೆ!!
ನಿಂತರು ಮಂದಿಯು ಮಣ್ಣಿಗಾಗಿ
ಬಡಿದೋಡಿಸಲು ಬಿಳಿಯರಿಗೆದುರಾಗಿ
ಗತ್ತಿನ ಗುಲಾಮಗಿರಿಯ ತುಚ್ಛತನಕ್ಕಾಗಿ
ಕರಜೋಡಿಸಿ ಕಸಿದ ಹಕ್ಕಿನ ಸ್ವಂತಿಕೆಗಾಗಿ
ಸಿಡಿದೆದ್ದರು ಸ್ವತಂತ್ರ ಭಾರತಕ್ಕೆ ಒಟ್ಟಾಗಿ
ಮಡಿದರೆಷ್ಟೋ ಮಂದಿ ದೇಶ ಪ್ರೆಮಕ್ಕಾಗಿ
!!ಬಿಡುಗಡೆ!!
ಹೊತ್ತಿತು ಹಿಂಸಾಜ್ವಾಲೆಯದು
ತೀವ್ರಗಾಮಿಗಳ ಬಲ ನೀತಿಯದು
ಮಿಣುಕುವ ಅಹಿಂಸಾ ದೀಪವದು
ಮಂದಗಾಮಿಗಳಿಗೆ ಬಲುಪ್ರೀತಿಯದು<
/p>
ಮುಪ್ಪಿನಲು ಉಪ್ಪಿನ ಸೆಣಸಾಟವದು
ಬ್ರಿಟೀಷರ ತೊಲಗಿಸೋ ಹೋರಾಟವದು
!!ಬಿಡುಗಡೆ!!
ಪರಂಗಿಯರ ಫಿರಂಗಿ ನೆತ್ತರನರಿಸಲು
ತೇಲಲು ಸತ್ಯಾಸತ್ಯದ ದೋಣಿಯ
ಮುಳುಗಿತು ಬಿಳಿಯರ ಅಸತ್ಯದ ನೀತಿ
ಮೊಳಗಿತು ಭಾರತೀಯರ ಸತ್ಯದ ಪ್ರೀತಿ
ದಡವನು ಮುಟ್ಟಲು ತ್ಯಾಗ ಬಲಿದಾನ
ಹೊರಟಿತು ಸ್ವಾತಂತ್ರ್ಯೋತ್ಸವದ ದಿಬ್ಬಣ
!!ಬಿಡುಗಡೆ!!
ಮೇರು ಭಾರತದ ಬಾವುಟ ಹಾರಿತು
ತ್ಯಾಗ ಶಾಂತಿ ಸಮೃದ್ಧಿಯ ಮೆರೆಯಿತು
ಮತ ಪಂಥ ಬೇಧವ ಗಾಳಿಗೆ ತೂರಿತು
ಮಡಿದ ಮಹಾನ್ ಚೇತನಗಳಿಗೆ ಮಣಿಯಿತು
ವಿವಿಧತೆಯಲ್ಲೇಕತಾ ಭಾವವ ಸಾರಿತು
ಭಾರತ ಮಾತೆಗೆ ವಂದಿಪೆನೆಂದಿತು
ದೇಶಭಕ್ತಿಯ ಪಾಂಚಜನ್ಯವು ಮೊಳಗಿತು
!!ಬಿಡುಗಡೆ!!