ಹೊಸವರುಷ
ಹೊಸವರುಷ
ಹಗಲು ಇರುಳು
ಬೈಗು ಬೆಳಗು
ಅಳೆದು ಅಳೆದು
ಉರುಳಿ ಉರುಳಿ
ಕಳೆದು ಹೋಯ್ತು
ವರುಷ ಒಂದು
ಮರಳಿ ಬಂತು
ಹೊಸತು ವರುಷ
ಅದೇ ಬೆಳಕು
ಅದೇ ಗಾಳಿ
ಅದೇ ನೀರು
ಅದೇ ಭೂಮಿ
ಬದಲಾಗದು
ಈ ಪ್ರಕೃತಿ
ಬದಲಾಯಿತು
ಮಾನವ ಜಗತ್ತು
ಬದಲಾಯಿತು
ಎಲ್ಲರ ಆಯಸ್ಸು
ಹಳೆಯ ನೀರು
ಕೊಚ್ಚಿ ಹೋಗಿ
ಹೊಸ ನೀರು
ಜುಳಜುಳನೆ
ಭರದಿ ಹರಿದು
ಹೊಸತನದ
ಹೊಸ ಹವಾ
ಎಲ್ಲೆಡೆಯಲಿ
ಏಳ್ಗೆಯ ಗಾಳಿ
ಹೊಸ ಆಸೆ
ಹೊಸ ಕನಸು
ಭರವಸೆಗಳಾ
ಹೊತ್ತು ತರಲಿ
ಹೊಸ ವರುಷ
ದ್ವೇಷ ಅಸೂಯೆ
ಕಳೆದು ಹೋಗಿ
ಪ್ರೀತಿ ಮಮತೆ
ವಿಶ್ವಾಸ ವಾತ್ಸಲ್ಯ
ಮಾನವತೆಯ
ಬೆಳೆಸಿಕೊಳ್ಳುತ್ತಾ
ನಾನು ನನ್ನದೆಂಬ
ಸ್ವಾರ್ಥ ಕಳೆದು
ನಾವು ನಮ್ಮದೆಂಬ
ವಿಶಾಲ ಭಾವ
ಬೆಳೆಯಲೆಂಬ
ನಿರ್ಧಾರ ನನ್ನದಾಗಲಿ
