ಹೊಳೆ
ಹೊಳೆ
ನಿಲ್ಲದ ತುಂತುರಿನ ಮಳೆ,
ಹರಿಸಿದೆ ನಮ್ಮೂರಿನ ಹೊಳೆ!
ಗೆಳತಿಯ ಕಂಡಿಹೆ ಪುತ್ರಿಯಲಿ
ಛತ್ರಿಯಗಿ ಕಾಯುತಿದೆ ಬಾಳೆಎಲೆ!
ಮೈಮನ ಪುಳಕಿಸುವ ಚಿಟಪಟ
ಜೊತೆ ಹತ್ತಾರು ಕಲ್ಪನೆಯ ನೀರಾಟ!
ಮಾತು ಮಾತಿಗೆ ನಗುತೇಲಿ
ತರಂಗಗಳ ಎಬ್ಬಿಸಿವೆ ಸುತ್ತಲಲಿ!
ಕಳೆದ ಬಾಲ್ಯವ ಮತ್ತೆ ನೆನೆದು
ಮಗಳಿಗೆ ಶರಣಾಗಿಹೆ ನಾ ಮಣಿದು!
ಆಟವೆ ಆದರೂ ಜೊತೆಯಾಡುತಿರೆ
ವಯಸಿನ ಹಂಗೂ ಆಗುತಿದೆ ಕಣ್ಮರೆ!
ಹೀಗೆಯೇ ಇರಲಿ ಅನುದಿನ ಸಂಭ್ರಮ
ಸಾರ್ಥಕವಾಗಲಿ ನಮ್ಮಿಬ್ಬರ ಸಮಾಗಮ!
