STORYMIRROR

Sugamma Patil

Inspirational Others

4  

Sugamma Patil

Inspirational Others

ಹೆಣ್ಣು

ಹೆಣ್ಣು

1 min
249


ಮನದಲ್ಲಿ ನೋವುಂಡು ಜನರ ಎದುರಲ್ಲಿ

ಮಂದಹಾಸ ತೋರುವಳು ಯುಗದಿ ಹೆಣ್ಣು

ನೂರಾರು ಕನಸುಗಳ ಎದೆಯಲ್ಲಿ ಬಚ್ಚಿಟ್ಟು

ತನ್ನವರಿಗಾಗಿ ನಿತ್ಯ ಶ್ರಮಿಸುವಳು ಹೆಣ್ಣು


ಜರಿಯುವರ ನಡುವೆ ಜಾಣತನದಿ ಇರುವಳು

ಜೊತೆಗಿರುವರ ನೆರಳಂತೆ ದಿನ ಕಾಯುವಳು

ಬವಣೆಯ ಬದುಕಲಿ ಹೊತ್ತಿ ಉರಿಯುವಳು

ದೀಪದಂತೆ ಸದಾ ಬೆಳಗುವ ಜ್ಯೋತಿಯಿವಳು


ಅವಮಾನ ಅನುಭವಿಸಿ ನಿಂದನೆಯ ಸಹಿಸಿ

ಅನುಮಾನ ಅಹಂಕಾರ ಎಲ್ಲಾ ದೂರವಿರಿಸಿ

ಅನುಗಾಲ ಬೇಡುವಳು ಕುಟುಂಬದ ಸುಖವ

ತನಗಾಗಿ ಕೇಳದವಳೆಂದು ಯಾವುದೇ ವರವ


ಸಮಯ ಕೊಟ್ಟಿಲ್ಲ ಅವಳೆಂದು ತನ್ನತನಕಾಗಿ

ಗೌರವ ದೊರೆತಿಲ್ಲ ಇನ್ನೂ ಅವಳ ತ್ಯಾಗಕಾಗಿ

ಆದರೂ ಕಿಂಚಿತ್ತೂ ಬೇಸರವಿಲ್ಲ ಅವಳಲ್ಲಿ 

ಯಾಕೆಂದರೆ ಸ್ತ್ರೀ ಎಂದಿಗೂ ಪರೋಪಕಾರಿ


Rate this content
Log in

Similar kannada poem from Inspirational