STORYMIRROR

Gireesh pm Giree

Children

3  

Gireesh pm Giree

Children

ಗೋಮಾತೆ

ಗೋಮಾತೆ

1 min
278

ಯುಗ ಯುಗದಲ್ಲೂ ಕಾಮಧೇನು ಎಂಬ ಬಿರುದು

ಗೋಮಾತೆಯ ಉಪಕಾರ ನಮಗೆ ಎಂದೂ ಹಿರಿದು

ಮುಕ್ಕೋಟಿ ದೇವರ ಸನ್ನಿಧಾನದ ಒಡಲು

ಪೊರೆಯುತಿರುವಳು ಭಾರತಾಂಬೆಯ ಮಡಿಲು


ಮಾನವ ಜನಾಂಗಕ್ಕೆ ಅಮೃತವ ಊಣಬಡಿಸುವೆ

ನಮ್ಮಯ ಆರೋಗ್ಯ ಜೀವನವ ಉದ್ಧರಿಸುವೆ

ಈಗ ಯುಗದಲ್ಲೂ ನಿರಂತರ ನಿನ್ನಯ ಸೇವೆ

ನಿನ್ನ ಪಡೆದ ನಿಜ ಅದೃಷ್ಟವಂತರು ನಾವೆ


ನಿನ್ನ ಕಂಡಾಗ ಕೈಮುಗಿಯ ಬೇಕೆಂಬ ಭಾವ 

ಆದರೂ ಕಟುಕರು ಹಿಂಡುತ್ತಿರುವ ನಿನ್ನ ಜೀವ

ಅವ ಮಾನವ ಗುಣ ಅರಿಯದ ದಾನವ

ಅವನಿಗೆ ಮನದಲ್ಲಿ ಇರುವುದು ಭಾವನೆಗಳ ಅಭಾವ


ತಾಯಿ ಎದೆಹಾಲು ಕುಡಿಸಿದ ಋಣವ ತೀರಿಸಲಾಗದು

ಭೂದೇವಿ ನಿತ್ಯ ಕೊಡುವ ಸಂಜೀವಿನಿಯ ಬಣ್ಣಿಸಲಾಗದು

ನಿನ್ನ ಉಳಿವು ನಮ್ಮೆಲ್ಲರ ಕರ್ತವ್ಯದ ಭಾಗ

ನಿನ್ನ ಕಾಪಾಡಬೇಕು ನಾವೆಲ್ಲರೂ ಈಗ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Children