Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Lakumikanda Mukunda

Inspirational

2  

Lakumikanda Mukunda

Inspirational

ಗಜಲ್

ಗಜಲ್

1 min
138


ಸಜ್ಜನರು ಕಟ್ಟಿದ ಸಾಮ್ರಾಜ್ಯದಲಿ ದುಷ್ಟಕೂಟವೊಂದು ಕೇಕೆ ಹಾಕುತ್ತಿದೆ ಸಾಕಿ.

ರಮ್ಯತೆಯ ಜಗದಲ್ಲಿ ರಣಭೀಕರ ಖಳನಾಯಕತ್ವವು ಆರ್ಭಟಿಸುತ್ತಿದೆ ಸಾಕಿ //


ಕಾಯಕವೆ ಮೇಲೆಂದು ಬಗೆವ ಜೀವಗಳು ಮಾನಕ್ಕೆ ಅಂಜಿ ಬದುಕುತ್ತವೆ.

ಮೂರು ಬಿಟ್ಟ ಮನವೊಂದು ನಾನೇ ಮೇಲೆಂದು ಅಟ್ಟಹಾಸಗೈಯುತ್ತಿದೆ ಸಾಕಿ. //


ನೂರು ಸತ್ಯಗಳ ಮಧ್ಯೆ ಒಂದು ಮಿಥ್ಯೆಯ ಕೈ ಮೇಲಾದರೂ ಆದೀತು. 

ಕಲಿಕಾಲದಲಿ ಸಾವಿರಾರು ಮಿಥ್ಯಗಳೆ ಮೇಲಾಗಿ ಸತ್ಯ ಸಾಯುತ್ತಿದೆ ಸಾಕಿ  


ಯಾರೊ ಕಟ್ಟಿದ ಅರಮನೆಗೆ ನಾನೆ ರಾಜನೆಂದು ಹುಚ್ಚನೊಬ್ಬ ಅರಚುತ್ತಿಹನು 

ಅರೆಬೆಂದ ಯೋಗ್ಯತೆಯು ಸಿಂಹಾಸನದಿ ಕುಳಿತು ಡೊಂಕಾಗುತ್ತಿದೆ ಸಾಕಿ//  


ಮೂರ್ಖರ ಸಂತೆಯಲಿ ಜಾಣನೆ ಏಕಾಂಗಿಯಾಗಿ ಮೌನಿಯಾಗಿದ್ದಾನೆ.

ಧ್ಯಾನದ ಅಂತಃಸುಖದಲ್ಲಿ ಏಕಾಂಗಿಯ ಮನವು ಆನಂದಿಸುತ್ತಿದೆ ಸಾಕಿ// 


Rate this content
Log in

Similar kannada poem from Inspirational