ಗೆಳೆಯ
ಗೆಳೆಯ
ನಾನೀಗ ಏಕಾಂಗಿ
ನನಗಿಲ್ಲ ಯಾರೂ
ನಿನಗಾಗಿ ಕಾದಿಹೆ
ನನ್ನೆಡೆಗೆ ಬಾರೊ
ಯಮುನಾ ತಟದಲಿ
ಅಮರ ಭಾವದಲಿ
ಸುಮಧರ ಗಾನಕೆ
ಅನುಗಾಲ ಕಾದಿಹೆ
ಮನವು ಬಯಸಿದೆ
ಮನಮೋಹನ ರಾಗ
ಅನುನಯದಿ ಪಾಡಿ
ನನ್ನ ಮನ ತಣಿಸೋ
ಏಕಾಂಗಿ ಮನವು
ಸಾಕಾಗಿ ಸೋತಿದೆ
ಲೋಕದ ಗೊಡವೆ
ಬೇಕಿಲ್ಲ ನನಗೆ
ನನಗೆ ನೀನೇ ಗತಿ
ನಿನಗೆ ನಾನೇ ಸತಿ
ನಿನ್ನ ಪ್ರಿಯ ರಾಧೆ
ನನಗಾಗಿ ಕಾದಿಹಳು