STORYMIRROR

Revati Patil

Abstract Classics Others

3  

Revati Patil

Abstract Classics Others

ದೂರ ಹೋಗಬೇಕಿದೆ

ದೂರ ಹೋಗಬೇಕಿದೆ

1 min
175

ದೂರ ಹೋಗಬೇಕಿದೆ ಎನಗೆ 

ಯಾರ ಸಂಗವೂ ಇಲ್ಲದ ಕಡೆಗೆ 

ಭಾರ ಆಗೇನು ಯಾರಿಗೂ ಕೊನೆಗೆ 

ಮರ, ಗಿಡಗಳಂತೆ ಸಹಾಯ ನೀಡಿ ಒಂದಿಬ್ಬರಿಗೆ


ಕರ ಮುಗಿವೆ ಬೇಡಿ ನಿನಗೆ 

ಕರುಣಿಸೈ ಮೋಕ್ಷವ ನನಗೆ 

ವರ ಇದೊಂದೇ ಸಾಕು ಜೀವಕೆ 

ದೂರ ಬರುವೆ ನಿನ್ನೆಡೆ, ದಿಗಂತಕೆ 


ಅವರಿವರ ಸಿಂಪತಿಯ ಭಾರವೇಕೆ 

ನನ್ನಿಂದಾಗದಿರೆ, ಈ ಅಸ್ತಿತ್ವವೇಕೆ? 

ನರನಿದ್ದ ಕಡೆ ಬೆಳೆಯದೂ ಗರಿಕೆ 

ಕಾರಣ ಹೇಳು, ಇಲ್ಲಿ ನಾನೇಕೆ? 


ದೂರ ಹೋಗಬೇಕಿದೆ ಎನಗೆ 

ಯಾರ ಸಂಗವೂ ಇಲ್ಲದ ಕಡೆಗೆ


Rate this content
Log in

Similar kannada poem from Abstract