ದುರಾಸೆಯ ಫಲ ಘೋರ.
ದುರಾಸೆಯ ಫಲ ಘೋರ.
ದುರಾಸೆಯ ಫಲ ಬಲು ಘೋರ.
ಓಡಾಡೋಣ ಎಲ್ಲರೂ ಉಚಿತವಾಗಿ,
ರಾಜ್ಯದೊಳಗೆ ಎಲ್ಲಿ ಬೇಕಾದರೂ ಆರಾಮವಾಗಿ.
ಬಸ್ಸಿನ ಖರ್ಚಿನ ಚಿಂತೆ ಇಲ್ಲ,
ಊಟಕ್ಕೆ ದೇವಸ್ಥಾನಗಳು ಖಾತ್ರಿ ಇದೆಯಲ್ಲಾ.
ಎಲ್ಲೆಲ್ಲೂ ಸ್ವಚ್ಛ ನೀರು ಸಿಗುವುದಲ್ಲ,
ಜೊತೆಗೆ ತೆಗೆದುಕೊಂಡು ಹೋಗಲು,
ಬಟ್ಟೆ ಇದ್ದರೆ ಸಾಕಲ್ಲ.
ಮನೆ ಕಡೆಯ ಚಿಂತೆ ಮಾಡೋ ಹಾಗಿಲ್ಲ, ಮನೆಯಲ್ಲಿರುವವರೇ ನಿಭಾಯಿಸಬೇಕು ಎಲ್ಲಾ.
ಎಲ್ಲಾದರೂ ತಿರುಗಾಡಲು ಇದ್ದರೆ,
ತಿರುಗಾಡಿ ಬಿಡಿ ಈಗಲೇ,
ಆಮೇಲೆ ಸಿಗುವುದು ಕಷ್ಟ ಇಂತಹ ಅವಕಾಶ.
ಎಂದು ಹೇಳುವವರೇ ಎಲ್ಲಾ.
ಹೊರಟೇನೊ ಹೊರಡಬಹುದು,
ಖರ್ಚಿಗೂ ದುಡ್ಡು ಇಟ್ಟುಕೊಳ್ಳಬಹುದು.
ಪುಟ್ಟನೆಯ ಬ್ಯಾಗನ್ನು ಸಿದ್ಧಪಡಿಸಿಕೊಳ್ಳಬಹುದು.
ಆದರೆ ಬಸ್ಸಿನಲ್ಲಿ ಸೀಟು ಸಿಕ್ಕುವ ಭರವಸೆ ಇಲ್ಲ,
ಚಾಲಕ ಬಸ್ಸನ್ನು ನಿಲ್ದಾಣದಲ್ಲಿ,
ನಿಲ್ಲಿಸಿ ಬಿಡುವ ಖಾತ್ರಿಯೂ ಇಲ್ಲ.
ತಿರುಗಾಡ ಹೋದವರು ಹುಷಾರಾಗಿ,
ಮನೆ ತಲುಪುವರು ಎಂಬ ಭರವಸೆಯೂ ಇಲ್ಲ.
ಆದರೂ ಬೇಕು ಜನರಿಗೆ ಎಲ್ಲವೂ ಉಚಿತ.
ಬದುಕು ನಾಳೆಗೆ ಇಲ್ಲದಿದ್ದರೂ ಖಚಿತ.
ವಿವೇಚಿಸಬೇಕು ಮನುಜ ಪ್ರತಿಯೊಂದು ವಿಚಾರವನ್ನು.
ಹಸಿದಾಗಲಷ್ಟೇ ತಿನ್ನಬೇಕು ಊಟವನ್ನು.
ಯಾರಿಗೊ ಸೇರಬೇಕಾದದ್ದನ್ನು ತಾವು ಕಬಳಿಸಬಾರದು.
ತಮ್ಮದಲ್ಲದನ್ನು ತಾವು ಅಪೇಕ್ಷೆಯೂ ಪಡಬಾರದು.
ಮನುಜನಿಗೆ ಆಸೆ ಸಹಜ,
ಆದರೆ ದುರಾಸೆ ಫಲ ಬಲು ಘೋರ.
