STORYMIRROR

Vijayalaxmi C Allolli

Abstract Classics Others

4  

Vijayalaxmi C Allolli

Abstract Classics Others

ದೀಪಾವಳಿ -ಕಚಗುಳಿ

ದೀಪಾವಳಿ -ಕಚಗುಳಿ

1 min
292

ಪ್ರತಿ ವರ್ಷ ಬರುವುದು 

ದೀಪಾವಳಿ

ಹೊತ್ತು ತರುವುದು

ನೆನಪುಗಳ ಕಚಗುಳಿ;

ಸಹೋದರರಿಗೆ

ಮಾಡುತ್ತಿದ್ದೆ ಆರತಿ

ಬರಲಿ ಅವರಿಂದ 

ತವರಿಗೆ ಕಿರುತಿ;

ಬಯಸುತ್ತಿದ್ದೆ ಮನೆಯೊಡೆಯ ಅಪ್ಪ

ಏನು ಕೊಡುವರು ಬಳುವಳಿ ಎಂದು

ರುಚಿಸುತ್ತಿದ್ದೆ ಮನೆಯೊಡತಿ ಅಮ್ಮನ

ಕೈಯಲ್ಲರಳಿದ ಮಲ್ಲಿಗೆಯಂತ ಹೋಳಿಗೆ ಅಂದು; 

ಹೀಗೇ ವರ್ಷ ವರ್ಷವೂ ಬರುವುದು ದೀಪಾವಳಿ

ಹೊತ್ತು ತರುವುದು ನೆನಪುಗಳ ಕಚಗುಳಿ...



Rate this content
Log in

Similar kannada poem from Abstract