ದೀಪ
ದೀಪ
ಸಜ್ಜನರ ಪಾಲಿಗೆ ಇದು ಉರಿವ ನಂದಾದೀಪ
ದುರ್ಜನರ ಪಾಲಿಗೆ ಇದು ದಗದಗಿಸುವ ಭಯಂಕರ ದೀಪ
ನೋಡುವ ಕಣ್ಣುಗಳ ನೋಟವೊಂದೇ ಆದರೆ ಅವರವರ ಮನದ ಆಲೋಚನೆ ಬೇರೆ
ಆಡುವ ಕೊಂಕು ಮಾತುಗಳಾಗಿವೆ ಕೊಡದೆ ಅದಕ್ಕೆ ತಣ್ಣೀರ ಎರೆ
ಒಳ್ಳೆಯ ಕಾಯಕ ಮಾಡಿದ ಮನುಜರ ಬೆನ್ನು ತಟ್ಟುತ್ತಾರ?
ಒಳ್ಳೆಯ ಮಾತು ಕೇಳುವ ಅನುಜರು ಈಗ ಇರುವರ?
ಒಳ್ಳೆಯ ಎಂಬ ಪದದ ಅರ್ಥವು ಕಣ್ಮರೆಯಾಗಿದೆ
ಸತ್ಯವು ಸೋಲಿಗೆ ಈಗ ತಲೆಬಾಗಿದೆ
ಒಬ್ಬರ ಮೆಟ್ಟುವರಿದ್ದಾರೆ ಅಕ್ಕ
ಆದರೆ ಬೆನ್ನುತಟ್ಟುವರಿಸಿದ್ದಾರೆಯೆ ಪಕ್ಕ?
ನಾವು ಏನೇ ಚೊಕ್ಕ ಕಾಯ ಮಾಡಿದರು ಚಿಕ್ಕ
ಅದೇ ಉಳ್ಳವರು ಮಾಡಿದ ಕಾಯ ಅದು ಚೊಕ್ಕ
