ಚಂದ್ರಚಕೋರಿ
ಚಂದ್ರಚಕೋರಿ
ಓ ಚಂದ್ರಚಕೋರಿ, ನನ್ನ ಕನಸಿನ ರಾಜಕುಮಾರಿ,
ಮನವೆಂಬ ತೆರೆಯ ಮೇಲೆ ಕುಣಿಯುವ ಸುಂದರಿ,
ನಿನ್ನ ಸೊಗಸು ಸೌಂದರ್ಯ ಲಹರಿ,
ನನ್ನ ಮನವ ಸೆಳೆದ ಕಡಲ ಕಿನ್ನರಿ.
ನೀನೇ ನನ್ನ ಹೃದಯ ಗೆದ್ದ ನಾರಿ,
ನನ್ನ ವಾಸವೋ ಕಲ್ಪನೆಯ ಕೇರಿ,
ಬಾರೆ ನನ್ನ ಕನಸ್ಸಿನ ಕುದುರೆಯೆರಿ.
ಸುಳಿಯುವೆಯ ಇನ್ನೊಂದು ಬಾರಿ.
ಮೊಗದಲ್ಲಿ ಮುಗುಳ್ನಗೆ ಬೀರಿ,
ಬಾಯಿಂದ ಸಿಹಿಮುತ್ತನ್ನು ಸುರಿ,
ಪ್ರೀತಿಯ ಕೋರಿ,
ನಿನ್ನ ನೋಡ ಬಯಸುವುದು ಇನ್ನೊಂದು ಸಾರಿ.
ಅದೇನೋ ಸ್ವಪ್ನವಾಗಿಯೇ ಉಳಿಯಿತು ಪ್ರತಿ ಬಾರಿ,
ತೋಚಲಿಲ್ಲ ನಿನ್ನ ಸೇರುವ ದಾರಿ,
ಕಣ್ಮರೆಯಾದೆಯೇ ಕನಸ್ಸಿಂದ ಹಾರಿ,
ಇರಬಹುದಿತ್ತಲ್ಲವೇ ನಿನ್ನೊಲುಮೆಯ ತೋರಿ,
ಅದಕ್ಕಾಗಿ ನಾ ತೆರಬೇಕೇ ಅದರ ದರ ಭಾರಿ?