ಹೆಣ್ಣು
ಹೆಣ್ಣು



ರೂಪದಲ್ಲಿ ಹೆಣ್ಣೆಯೆಂಬ ಮಾಯೆ
ಪ್ರತಿರೂಪದಲ್ಲಿ ಹಲವು ಛಾಯೆ!
ಹುಡುಕುವರು ಅವಳ ಮನದಲ್ಲಿ ಹುಳುಕು
ಅವಳು ಮನೆ-ಮನಯಲ್ಲಿ ಬೆಳಗಿದ ಬೆಳಕು!
ಮಗುವನ್ನು ಹಡೆದು ತಾಯಿಯಾಗಿ ಮಾರ್ಗದರ್ಶಿಯಾದೆ,
ಕುಟುಂಬದ ಆರತಿ ಬೆಳಗುವ ಮಗಳಾದೆ,
ಸಹೋದರನಿಗೆ ನೆಚ್ಚಿನ ಸಹೋದರಿಯಾದೆ,
ನೊಂದ ಹೃದಯಕ್ಕೆ ಕಣ್ಣಿರೋರೆಸುವ ಗೆಳತಿಯಾದೆ.
ಪತಿಗೆ ಪ್ರಿಯ ಸತಿಯಾದೆ,
ಪ್ರಿಯಕರನಿಗೆ ಜೀವದ ಗೆಳತಿಯಾದೆ,
ಅಪೂರ್ಣತೆಯ ಪುರುಷನಿಗೆ ಪರಿಪೂರ್ಣತೆಯ ಆಗರವಾದೆ,
ಸರ್ವ ಕ್ಷೇತ್ರಗಳಲ್ಲಿ ಸರ್ವ ಸ್ಥಾನಗಳಲ್ಲಿ ಅಲಂಕೃತವಾಗಿ ಸಾಧನೆಯ ಪ್ರತೀಕವಾದೆ.