STORYMIRROR

Karthik S. P.

Classics Inspirational

1  

Karthik S. P.

Classics Inspirational

ತಾಯಿ

ತಾಯಿ

1 min
47


ನಿನ್ನ ನೋವಿನಲ್ಲಿ ಹುಟ್ಟಿ,

ನಿನ್ನ ಪ್ರೀತಿಯಲ್ಲಿ ಬೆಳೆದು,

ನಿನ್ನ ಅಂತರಂಗವ ಮುಟ್ಟಿ,

ನೀ ಮರುಜನ್ಮ ಪಡೆದು.


ನೀ ಆದೇ ಮೊದಲ ಗುರು,

ನೀ ಬೆಸೆದೇ ಬಂಧವನು,

ನೀನಿಲ್ಲದ ನಾನು ಯಾರು?

ನೀ ಕೊಟ್ಟೆ ಸಂಬಂಧವನು.


ಹಡೆಯುವಾಗ ನೋವ ಸಹಿಸಿ,

ನೀ ಬೆಳೆಸಿದ ರೀತಿ,

ತುತ್ತುಣಿಸಿ ಪ್ರೀತಿಯಿಂದ ಹರಸಿ,

ಸಲಹುತಿದೆ ಇಂದಿಗೂ ನಿನ್ನಕ್ಕರೆಯ ಕಾಂತಿ.


ಮೊದಲು ನಾ ಅತ್ತಾಗ,

ನಿನ್ನ ಮೊಗದಲ್ಲರಳಿತು ಕಿರುನಗೆಯ ಮೊಗ್ಗೆ,

ಮೊದಲು ನಾ ನಕ್ಕಾಗ,

ನಿನ್ನ ಮೊಗದಿಂದಿಳಿಯಿತು ಕಣ್ಣೀರಿನ ಬುಗ್ಗೆ.


ತೋರಲಿಲ್ಲ ನನ್ನೆಡೆಗೆ ಕೋಪ,

ಕಲಿಸುತ್ತಾ ಬೆಳೆಸಿದೆ.

ನನ್ನಲ್ಲಿದ್ದರೂ ಲೋಪ,

ತಿದ್ದುತ್ತಾ ಕಲಿಸಿದೆ.


ನಿನ್ನ ಅಳೆಯಲು ಪದಗಳು ಸಾಲವು,

ಈ ಕವಿತೆಯಲ್ಲಿ ಅರಳಿತು ಭಾವವು.


ಹೆತ್ತು ಹೊತ್ತು ಬೆಳಸಿದಾಕೆ

ಹೊತ್ತಿನೊಳಗೆ ಉಣಿಸಿದಾಕೆ

ಮೊದಲ ಮನೋವೈದ್ಯೆಯಾಕೆ

ನಂಟಿನಲ್ಲಿ ಕುಟುಂಬವ ಪೊರೆಯುವಾಕೆ


ಮಗು ಅತ್ತು ಸೊರಗಿದಾಗ ಮುದ್ದಿಸಿದಾಕೆ

ಕೊತು ಕೊರಗಿದಾಗ ಪ್ರೀತಿಸಿದಾಕೆ

ಸೂಕ್ಷ್ಮತೆಯ ಅರಿವಿನ ಶ್ರಮವಾಕೆ

ಒಲವು-ಛಲವು-ಯುಕ್ತಿ-ಶಕ್ತಿಯ ರೂಪ-ಪ್ರತಿರೂಪವಾಕೆ


ನೋವನ್ನುಂಡು ನಲಿವ ಹರಿಸಿದಾಕೆ

ಅನನ್ಯ ಪ್ರೀತಿಯಂಚುವ ಶಿಖರವಾಕೆ

ಅವಳ ಬಣ್ಣಿಸಲು ಈ ಪದಗಳು ಸಾಕೆ?

ಅವಳ ಪ್ರೀತಿಯ ತಿರಸ್ಕರಿಸದಿರಿ ಜೋಕೆ!



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics