ಚಿನ್ನದ ಪೆಟ್ಟಿಗೆ
ಚಿನ್ನದ ಪೆಟ್ಟಿಗೆ
ಹೆಣ್ಣೆಂದರೆ ಕನ್ನಡದ ಹೆಣ್ಣು ಹಣ್ಣೆಂದರೆ ಹಲಸಿನಹಣ್ಣು
ಭೂಲೋಕದಲ್ಲಿ ಬೆಳೆಯುವ ಸಗ್ಗದ ಹಣ್ಣು
ಮೈತುಂಬ ಸಾವಿರ-ಸಾವಿರ ಹುಣ್ಣು
ಆದರೂ ನಿನ್ನತ್ತ ಬೀಳುವುದು ಎಲ್ಲರ ಕಣ್ಣು
ಮರದ ಮೇಲೆ ಜೋಗಾಲಿ ಆಡುವೆ
ಅತ್ತ ಇತ್ತ ಹೋಗುವ ಮಂದಿಯ ಮನ ಸೆಳೆಯುವೆ
ನೋಡುಗರ ಕಣ್ಣಿಗೆ ಚಿನ್ನದ ಪೆಟ್ಟಿಯಲ್ಲಿ ಬೆಳ್ಳಿಯ ಲಿಂಗ
ಸವಿಯಲು ಇಷ್ಟ ಬಿಡಿಸಲು ಕಷ್ಟ ನಿನ್ನ ಮೈ ಕಟ್ಟೇ ಹಂಗ
ನಿನ್ನ ಕೊಯ್ದರೆ ಸುತ್ತೂರ ಜನರಿಗೂ ತಿಳಿಯುವುದು ಬೇಗ
ಹತ್ತಾರು ಮಂದಿ ಸವಿಯಲು ಬರುವರು ಓಡೋಡಿ ಅಲ್ಲಿ ಈಗ
ನಿನ್ನ ಚಪ್ಪರಿಸುವ ಮಂದಿಗೆ ಅದೊಂದು ಹಬ್ಬ
ಹಲಸಿನಹಣ್ಣಿನ ಗುಣಗಾನ ತಿಳಿದರೆ ಅಬ್ಬಬ್ಬಾ
