ಬಳೆ ಮತ್ತು ಬಳೆಗಾರ
ಬಳೆ ಮತ್ತು ಬಳೆಗಾರ
ಹಸಿರು ಸಿರಿಯ ಮಧ್ಯೆ ನಮ್ಮ ಮನೆಯಂತೆ
ಮದುವಣಗಿತ್ತಿಯಂತೆ ಅಲ್ಲಿರುವವಳು
ನನ್ನ ತಂಗಿಯಂತೆ.
ಮನೆಯ ಮುಂದೆ ಚೆಂದದ ಹಸಿರ ಚಪ್ಪರವಂತೆ
ಹಸಿರ ದಾವಣಿಯುಟ್ಟು ಕಿಲಕಿಲವೆಂದು ನಗುತಿರುವವಳೇ ನನ್ನ ಮುದ್ದು ತಂಗಿಯಂತೆ..!!
ಮನೆಯೊಳಗೆ ಬಳೆಗಾರ ಬಂದೇ ಬಿಟ್ಟನಂತೆ
ಮದುಮಗಳ ಕಳೆಹೊತ್ತ ನನ್ನ ತಂಗಿಗೆ
ಹಸಿರು ಗಾಜಿನ ಬಳೆಗಳನ್ನು ತೊಡಿಸಿ
ದೃಷ್ಠಿ ತೆಗೆದೇ ಬಿಟ್ಟನಂತೆ...!!
