ಬಿಟ್ಟು ಹೋದ ಹುಡುಗಿ
ಬಿಟ್ಟು ಹೋದ ಹುಡುಗಿ


ಬಿಟ್ಟು ಹೋದ ಹುಡುಗಿ
ಮತ್ತೆ ನೋಡದಿರು ತಿರುಗಿ
ಹಿಡಿದಿದ್ದ ಹುಚ್ಚು ಈಗೀಗ ಬಿಟ್ಟಿಹುದು
ತಿಳಿದಾಯ್ತು ಜೀವನ ಹೇಗೆ ಏನೆಂದು.
ಹಿಂದೆ ಹಿಂದೆ ಅಲೆದು
ಜೇಬಲ್ಲಿದ್ದ ದುಡ್ಡು ಖಾಲಿ
ಕಂಡ ಕಂಡ ಜನರು
ಕರೆದಿಹರು ನನ್ನ ಪೋಲಿ
ಮಾರುಹೋಗಿ ನಿನ್ನ ಸ್ಟೈಲಿಗೆ
ಮಾರಿಕೊಂಡೇ ನನ್ನ ನಾಲಿಗೆ
ಬಿಟ್ಟು ಹೋದ ಹುಡುಗಿ
ಮತ್ತೆ ನೋಡದಿರು ತಿರುಗಿ.
ಯಾವವಾರ ಗೊತ್ತಿಲ್ಲ
ತಿಂಗಳುಗಳೇ ಮರೆತೋಯ್ತಲ್ಲ
ತಿನ್ನದಿರೋ ತಿಂಡಿಯಿಲ್ಲ
ಸುತ್ತದಿರೋ ಹೋಟೆಲ್ಲಿಲ್ಲ
ಕಟ್ಟಿ ಕಟ್ಟಿ ಎಲ್ಲಾ ಬಿಲ್ಲನು
ಮುರಿದುಕೊಂಡೆ ನನ್ನ ಬೆನ್ನನು
ಬಿಟ್ಟು ಹೋದ ಹುಡುಗಿ
ಮತ್ತೆ ನೋಡದಿರು ತಿರುಗಿ.
ಅಪ್ಪ ಅಮ್ಮ ಅಂತಿಲ್ಲ
ನೆಂಟರುಗಳ ನೆನಪಿಲ್ಲ
ಅಕ್ಕ-ತಮ್ಮ ಜೊತೆಯಿಲ್ಲ
ಅಕ್ಕರೆಯ ಮಾತುಗಳಿಲ್ಲ
ಅಂದು ಮಾಡಿದ ಒಂದು ತಪ್ಪನು
ಮತ್ತೆ ಮಾಡಲಾರೆ ಬುದ್ದಿ ಕಲಿತೆನು.
ಬಿಟ್ಟು ಹೋದ ಹುಡುಗಿ
ಮತ್ತೆ ನೋಡದಿರು ತಿರುಗಿ
ಹಿಡಿದಿದ್ದ ಹುಚ್ಚು ಈಗೀಗ ಬಿಟ್ಟಿಹುದು
ತಿಳಿದಾಯ್ತು ಜೀವನ ಹೇಗೆ ಏನೆಂದು.