ಮಿಡ್ ನೈಟು ಈ ಹುಡುಗರು ಫುಲ್ ಟೈಟು
ಮಿಡ್ ನೈಟು ಈ ಹುಡುಗರು ಫುಲ್ ಟೈಟು
1 min
2.9K
ಮಿಡ್ ನೈಟು ಮಿಡ್ ನೈಟು ಈ ಹುಡುಗರು ಫುಲ್ ಟೈಟು,
ತಂಪಾದ ಈ ಹೊತ್ತಲ್ಲೆ ಹಚ್ಚುತ್ತಾರೆ ಸಿಗರೇಟು.
ವೀಕೆಂಡು ಬರಲಿ ಅಂತ ವಾರವೆಲ್ಲ ವೈಟಿಂಗು,
ಯಾರೆಲ್ಲ ಸೇರೋದಂತ ವೀಕು ಫುಲ್ ಪ್ಲಾನಿಂಗು,
ಸಮಯದ ಪರಿವೆ ಇಲ್ಲ ಹೆಚ್ಚಾಯ್ತು ಡ್ರಿಂಕಿಂಗು,
ಇದ್ದ ಹಣ ಖರ್ಚಾಗಿ ಕ್ರೆಡಿಟ್ ಕಾರ್ಡು ಯೂಸಿಂಗು.
ಮನೆಗೆ ಬರುವ ದಾರಿಯಲ್ಲಿ ಹೊಟ್ಟೆಯು ಹಸಿದಿತ್ತು,
ಸುತ್ತ-ಮುತ್ತ ನೋಡಿದಾಗ ಹೋಟ್ಲು ಬಾಗ್ಲು ಹಾಕಿತ್ತು,
ಊಟಕ್ಕೆ ಹಿಡಿದ ಪ್ಲೇಟು ಸಿಕ್ಕಿದ್ದು ಬರಿ ಆಮ್ಲೆಟು,
ಇದ್ದಿದ್ದು ಒಂದೇ ಮೊಟ್ಟೆ ಸೇರಿತ್ತು ಹಸಿದ ಹೊಟ್ಟೆ.
ನಿನ್ನ ಅಪ್ಪ ಅಮ್ಮ ಇಬ್ಬರೂ ಕಷ್ಟು ಪಟ್ಟು ಉಳಿಸಿದ್ರು,
ನಮ್ಮ ಮಕ್ಳು ಸಂದಾಗಿರಲಿ ಹಗಲು ರಾತ್ರಿ ಹರಸಿದ್ರು,
ನಿಮಗೆ ಒಳ್ಳೆ ಬಟ್ಟೆ ಕೊಡಿಸಿ ಹರಿದ ಬಟ್ಟೆ ಹಾಕ್ತಿದ್ರು,
ಕಷ್ಟ ಕಣ್ಣಿಗೆ ಕಾಣದಂತೆ ನಿಮ್ಮನ್ನ ಸಾಕಿ ಬೆಳೆಸಿದ್ರು.