ಬೆಸುಗೆ
ಬೆಸುಗೆ


ಸಾಹೇಬನ ಮಗಳು ನವಾಬನ ಸೊಸೆಯಾದಳು
ಹೋಳಿ ಹುಣ್ಣಿಮೆಗೆ, ಶಶಿಧರ ಶರೀಫ,
ಹಚ್ಚೆ ಹುಯಿದಿರುವರು.
ದಾಳ ಉರುಳಿಸಿ ದಾಯಾದಿ ಆಗದಿರು
ಸವತಿ ಮತ್ಸರ ಅಪಖ್ಯಾತಿ ಎತ್ತರ
ದೇಹವು ಮೂಳೆ ಮಾಂಸಗಳ ತಡಿಕೆಯಿದು
ದ್ವೇಷ ಮರೆತು ರಕ್ಷಾಬಂಧನ ತೊಡಿಸು.
ಉಂಡು ಉರುಳಾಡುವ ಬದಲು
ಉಣ್ಣಕ್ಕಿಲ್ಲದವರಿಗೆ ಉಣಿಸಿ ನೋಡು
ಅರಳುವ ಹೂ ಮನವ
ಆ ಕೂಡಲಸಂಗಮನು ಒಲಿದಾನು ನೋಡು.