ಬೆಳ್ಳಗಿರುವುದೆಲ್ಲಾ ಹಾಲಲ್ಲ
ಬೆಳ್ಳಗಿರುವುದೆಲ್ಲಾ ಹಾಲಲ್ಲ
ಬೆಳ್ಳಗಿರುವುದೆಲ್ಲ ಹಾಲಲ್ಲ ಗೆಳೆಯ
ಹುಳಿ ಹಿಂಡಿ ಹಾಲ ಕೆಡಿಸುವುದಿಲ್ಲ
ಒಳ್ಳೆತನದ - ಕೆಟ್ಟತನದ ಹುಳುಗಳ
ಮನದೊಳಗಿಂದ ನೋಡಿ ಅರಿತುಕೊ!!
ಬರುವ ಅಲೆಯ ಸುಳಿಗಳ ಬಿಡಿಸಿಕೊಂಡು
ಒಳ್ಳೆಯತನದಿಂದ ಜ್ಯೋತಿಯ ಬೆಳಗುತಲಿ
ಅವರಿವರ ಮಾತುಗಳಿಗೆ ಕಿವಿ ಕೊಡದಿರು
ಜೀವನ ಶಾಲೆಯಲ್ಲಿ ಸದಾ ನಡೆಯುತ್ತಿರು!!
ಗುಣ ನಡತೆಗಳೇ ಪರಿಶುದ್ಧರ ಬಾಳು
ಬಿಡಿಸಿದರೆ ತಿಳಿವುದು ಸುಂದರ ಚಿತ್ರಗಳು
ಇಲ್ಲಿ ಸ್ವಂತದ್ದೇನಿದೆ ಎಂಬುದ ತಿಳಿ ಮೊದಲು
ಅಂತರಾಳದ ಚಿಂತೆಯ ಸುಟ್ಟು ಬೂದಿಮಾಡು!!
ಸ್ನೇಹ ಪ್ರೀತಿಯೇ ಬತ್ತದ ಸಂಪತ್ತುಗಳು
ಅದನು ಉಳಿಸಿ ಬೆಳೆಸಬೇಕು ನಾವು
ಕಥೆ ಕಟ್ಟಿ ಕಿವಿ ಊದುವುದ ಬಿಟ್ಟು
ನೀತಿವಂತರಾಗಿ ಬಾಳಬೇಕು ಜಗದಲಿ!!
