ಬೇಷರತ್ ಪ್ರೀತಿ
ಬೇಷರತ್ ಪ್ರೀತಿ

ಅಮ್ಮನಿಂದ ನಾ ಬಂದೆ ಆದರೆ ಅಮ್ಮನ ನೆನಪಿಂದ ನಾ ನೊಂದೆ
ಅಮ್ಮ ನಾ ಹುಟ್ಟುತ್ತಲೇ ನನ್ನ ರಾಣಿಯಾಗಿ ಕಂಡಳು
ಅಮ್ಮ ನಾ ಹೇಳಿದ್ದಕ್ಕೆಲ್ಲ ಸೈ ಎಂದು ಹುರಿದುಂಬಿಸುತ್ತಿದ್ದಳು
ಈಗ ನನ್ನನ್ನು ನಾನೇ ಹುರಿದುಂಬಿಸಿಕೊಳ್ಳಬೇಕು
ಅಮ್ಮನಿಂದ ನಾ ಬಂದೆ ಆದರೆ ಅಮ್ಮನ ನೆನಪಿಂದ ನಾ ನೊಂದೆ
ಅಣ್ಣ ನನ್ನೊಟ್ಟಿಗೆ ಜಗಳವಾಡಿದಾಗ, ನನ್ನ ಪರವಹಿಸುತ್ತಿದ್ದಳು
ಈಗ ನನಗೆ ನಾನೇ ಪರವಹಿಸಿಕೊಳ್ಳಬೇಕು
ಅಮ್ಮನಿಂದ ನಾ ಬಂದೆ ಆದರೆ ಅಮ್ಮನ ನೆನಪಿಂದ ನಾ ನೊಂದೆ
ಹೊಸ ಅಂಗಿ, ಬಳೆ, ವಾಲೆ ಎಲ್ಲಾ ನಂಗೆ
ಕಷ್ಟಗಳನ್ನೆಲ್ಲಾ ನೀ ನುಂಗಿದೆ ಎಂಗೆ
ಅಮ್ಮನಿಂದ ನಾ ಬಂದೆ ಆದರೆ ಅಮ್ಮನ ನೆನಪಿಂದ ನಾ ನೊಂದೆ
ಹೊಲೆ ಹಚ್ಚಲು ಬಿಡ್ಲಿಲ್ಲ, ಮನೆ ಕೆಲಸದಿಂದ ಇಟ್ಟೆ ನನ್ನ ದೂರ
ಆದರೂ ನೀ ನನ್ ಮೇ
ಲಿಟ್ಟ ನಂಬಿಕೆ ಅಪಾರ
ಅಮ್ಮನಿಂದ ನಾ ಬಂದೆ ಆದರೆ ಅಮ್ಮನ ನೆನಪಿಂದ ನಾ ನೊಂದೆ
ನಿನ್ನ ನಂಬಿಕೆಯೇ ಎನಗೆ ದಾರಿ ದೀಪ ಅಳಿಸಿ ನನ್ನ ಕೋಪ
ಹಚ್ಚಿದೆ ನಾ ಗಂಡನ ಮನೆಯ ನಂದಾದೀಪ
ಅಮ್ಮನಿಂದ ನಾ ಬಂದೆ ಆದರೆ ಅಮ್ಮನ ನೆನಪಿಂದ ನಾ ನೊಂದೆ
ಇಂದಿಗೂ ನಿನ್ ಮಕ್ಕಳ ಮೇಲೆ ತೋರುವ ಪ್ರೀತಿ
ಕಂಡರೆ ಆಗುವುದು ನನಗೆ ಭೀತಿ
ಅಮ್ಮನಿಂದ ನಾ ಬಂದೆ ಆದರೆ ಅಮ್ಮನ ನೆನಪಿಂದ ನಾ ನೊಂದೆ
ನಿನ್ ಹಾಗೆ ತೋರಿಸಲಾರೆ ನಾ ಪಿರೂತಿ
ಯಾಕಂದ್ರೆ ನನಗಿಲ್ಲ ನಿನ್ ಹಾಗೆ ಪ್ರೀತಿಯ ಮೂಗುತಿ
ಅಮ್ಮನಿಂದ ನಾ ಬಂದೆ ಆದರೆ ಅಮ್ಮನ ನೆನಪಿಂದ ನಾ ನೊಂದೆ
ಮಕ್ಕಳಾ ಮೊದಲ್ಗೊಂಡು ಮೊಮ್ಮಕ್ಕಳಾ ಅಮ್ಮಮ್ಮ ನಮ್ಮಮ್ಮ ನೀನು
ತೀರಿಸಲಾರೆ ನಿನ್ನೀ ಋಣವ ನಾನು .........