STORYMIRROR

Gireesh pm Giree

Inspirational

2  

Gireesh pm Giree

Inspirational

ಬಾಲ್ಯ

ಬಾಲ್ಯ

1 min
169

ಅಂಬರವೇ ಆ ಚಿನ್ನರಿಗೆ ಚಪ್ಪರ

ದರಿಯಾ ಕಂದಮ್ಮಗಳಿಗೆ ಆಧಾರ

ಜೊತೆಯಲ್ಲಿ ಕುಳಿತು ಆಡುವ ಗಳಿಗೆ

ಬಾಳಿಗೆ ಆ ಸವಿ ಸಂಚಿಕೆಯು ಹೋಳಿಗೆ


ತಂತಿಯಲ್ಲಿ ಅರಳಿದ ನಾದದ ಲಹರಿ

ಕೇಳುವ ಕಿವಿಗಳಿಗೆ ವಿಸ್ಮಯದ ಅಚ್ಚರಿ

ಹಳ್ಳಿಯ ಸೊಬಗೇ ಕಣ್ಣುಗಳ ಅರಳಿಸಲು

ಮಕ್ಕಳ ತುಂಟಾಟ ನಮ್ಮ ಆನಂದಿಸಲು


ಮುಗ್ಧತೆಯು ಮೊಗದಲ್ಲಿ ತುಂಬಿ ತುಳುಕುವುದು

ಪ್ರೀತಿ ಭಾವನೆಗಳ ಸಂಗಮ ಅಲ್ಲಿ ಬೆಳಗುವುದು

ಜೊತೆ ಜೊತೆಯಲ್ಲಿ ಕಳೆವ ದಿನಗಳೇ ಸುಮಧುರ

ಮುಗ್ಧ ತಂಗಿಯ ನಗುವೇ ಅವರಿಗೆ ಮಧುರ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational