ಅವನಿಗೂ ನೋವಿದೆ
ಅವನಿಗೂ ನೋವಿದೆ
ನೋವನ್ನು ಎದುರಿಸಲುಬೇಕು ಆತ್ಮಬಲ
ಆ ನೋವನ್ನು ಗೆಲ್ಲುತ್ತೇನೆ ಎಂಬುದು ಚಲ
ಚಲ ಬಲವಿದ್ದರೆ ದೂರ ನೋವು
ಇವ ಅಳವಡಿಸಿದರೆ ನಲಿವು ಗೆಲುವು
ದಿನಬೆಳಗೋ ದಿನಕರ
ರಾತ್ರಿ ಬೆಳಗೋ ಚಂದಿರ
ಇವುಗಳಿಗೆ ಗ್ರಹಣ ತಪ್ಪಿದ್ದಲ್ಲ
ನಮಗೂ ನೋವೆ ಜೀವನವಲ್ಲ
ಇಳೆ ಒದ್ದೆ ಆಗುತ್ತೆ ಅಂತ ಮಳೆ ಬರದೇ ಇರದು
ಭೂಮಿ ಬೆಳಗುತ್ತೆ ಅಂತ ರವಿ ಬೆಳಗದೆ ಇರನು
ಹಾಗೇ ನೋವು ನಲಿವು ಜೀವನದಲ್ಲಿ ಸಹಜ
ಇದು ಅರಿತರೆ ಬಾಳು ಹಸನು ಮನುಜ
