ಅವಳು ಒಬ್ಬಂಟಿ
ಅವಳು ಒಬ್ಬಂಟಿ
ಒಬ್ಬಂಟಿ ಅವಳು
ಜಂಟಿಯಾಗಲೊಪ್ಪದವಳು
ಮುಟ್ಟಿದ ಗೆಜ್ಜೆಯೊಂದೇ ಸಾಕು
ಮೆಟ್ಟಿ ನಿಂತವಳಿಗೆ, ಹೆಜ್ಜೆಗಳೇ ಸರಕು
ರಾಗ ತಾಳದೊಂದಿಗೆ, ಘಲ್ ಘಲ್ ನಾದ
ಸೂರ್ಯನು ಸಹ ನಾಚಿ ಕೆಂಪಾದ
ದಿಗಂತದಲ್ಲೆಲ್ಲೋ ಪಕ್ಷಿಗಳ ನಿನಾದ
ಹೊಟ್ಟೆಕಿಚ್ಚು ಗಿಡ ಮರ ಬಳ್ಳಿಗೂ
ಕಂಡು ಇವಳ ವಿನೋದ
ಮತ್ತೇ ಸೋತ ಅವನು
ಈಗ ಮರೆಯಲ್ಲೇ ಮೌನಿಯಾದ
