ಅಪ್ಪ
ಅಪ್ಪ
ತಾಯಿಯ ಮಡಿಲು
ಮಮತೆಯ ಒಡಲು
ತಂದೆಯ ಹೆಗಲು
ಕುತೂಹಲದ ಕಡಲು
ಹೆಗಲೇರಿ ಕುಳಿತರೆ
ಅದುವೆ ಕುದುರೆ ಸವಾರಿ
ಬೆನ್ನೇರಿ ಕುಳಿತರೆ
ಅದುವೆ ಆನೆ ಅಂಬಾರಿ
ಕೇಳದೆ ಕೊಡಿಸುವನು
ಮಕ್ಕಳಿಗಾಗಿ ಎಲ್ಲಾ..
ತನಗಾಗಿ ಏನು
ಬಯಸುವುದಿಲ್ಲ..
ಮರೆಯುವನು ತನ್ನ ಸುಖ
ಪೂರೈಸುವುದರಲಿ ಮಕ್ಕಳ ಆಸೆಗಳ...
ಶ್ರಮಿಸುವನು ಹಗಲಿರುಳು
ಈಡೇರಿಸಲು ಮಕ್ಕಳ ಕನಸುಗಳ..