STORYMIRROR

Ashritha Kiran ✍️ ಆಕೆ

Classics Inspirational Others

4  

Ashritha Kiran ✍️ ಆಕೆ

Classics Inspirational Others

ಬೇಸಿಗೆ

ಬೇಸಿಗೆ

1 min
340

ಹಿಂದೆ ಕಾಯುತ್ತಿದ್ದರು ಬೇಸಿಗೆಗೆ

ಅಂಗಳ ಸಿದ್ದವಾಗುತ್ತಿತ್ತು ಒಣಗಿಸಲು ಹಪ್ಪಳ ಸಂಡಿಗೆ

ಮೊಮ್ಮಕ್ಕಳಿಗಾಗಿ ಕಾಯುತ್ತಿತ್ತು ಮನೆಯ ಉಪ್ಪರಿಗೆ

ಉರಿ ಬಿಸಿಲ ದಣಿವಾರಿಸಲು ತಯಾರಾಗುತ್ತಿತ್ತು 

ಪಾನಕ ನೀರು ಮಜ್ಜಿಗೆ..

ಬದಲಾಗಿಹುದೆಲ್ಲಾ ಇತ್ತೀಚೆಗೆ

ರಜದಲ್ಲಿ ಸೇರುತಿಹುರು ಮಕ್ಕಳು ಬೇಸಿಗೆ ಶಿಬಿರಗಳಿಗೆ

ವ್ಯಾಪಾರಸ್ಥರಿಗೆ ಮಾತ್ರ ಮೀಸಲಾಗಿಹುದು ಹಪ್ಪಳ ಸಂಡಿಗೆ

ಹವಾಮಾನದ ಏರಿಳಿತಕ್ಕೆ ಹೆಚ್ಚಾಗುತ್ತಿಹುದು ಬೇಸಿಗೆಯ ಧಗೆ

ದಣಿವಾರಿಸಿಕೊಳ್ಳಲು ಮೊರೆ ಹೋಗುವಂತೆ ಆಗಿದೆ 

ಐಸ್ ಕ್ರೀಮ್ ಕೂಲ್ ಡ್ರಿಂಕ್ಸ್ ಗಳಿಗೆ...



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics