STORYMIRROR

Ashritha Kiran ✍️ ಆಕೆ

Classics Inspirational Others

4  

Ashritha Kiran ✍️ ಆಕೆ

Classics Inspirational Others

ಕನಸು

ಕನಸು

1 min
264

ಕನಸು ಕಾಣಲು ಮನಸಿಗೆ ಕೊಡಬೇಕಿಲ್ಲ ಕಾಸು..

ಕನಸು ಈಡೇರಿಸಲು ಬೇಕು ಕೈ ತುಂಬಾ ಕಾಸು..


ಕಾಸಿದ್ದ ಮಾತ್ರಕ್ಕೆ ಮೂಡದು ಒಳ್ಳೆಯ ಕನಸು

ಕಾಸಿಲ್ಲದಿದ್ದರು ಚಿಂತೆ ಮೂಡಿಸದು ಸವಿಗನಸು


ಐಶಾರಾಮಿ ಬದುಕಿಗೆ ಸಾಲದು ದುಡಿದಷ್ಟು ಕಾಸು...

ಹೊರಟಾಗ ದುಡ್ಡಿನ ಬೆನ್ನತ್ತಿ ಬದುಕೆನಿಸುವುದು ತ್ರಾಸು..


ಕೂಡಿಟ್ಟ ಹಣದಿಂದ ಕಂಗೆಡುವುದು ಮನಸು....

ಆತಂಕದ ನಿದ್ದೆಗೆ ಮೂಡದು ಒಳ್ಳೆಯ ಕನಸು..


ಕನಸ ಕಾಣುವ ಕಣ್ಣಿಗೆ ಇರಬೇಕು ಸಾಧಿಸುವ ಛಲ

ಈಡೇರದೆ ಇರದು ಕನಸು ಸಿಕ್ಕಾಗ ಒಂದಿಷ್ಟು ಬೆಂಬಲ..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics