STORYMIRROR

Ashritha Kiran ✍️ ಆಕೆ

Classics Inspirational Others

4  

Ashritha Kiran ✍️ ಆಕೆ

Classics Inspirational Others

ಮರೆಸುವುದು ಮೈ ಮನವ..

ಮರೆಸುವುದು ಮೈ ಮನವ..

1 min
356

ಮೊಬೈಲ್ ಕೈಯಲ್ಲಿರಲು

ಮರೆಸುವುದು ಇಹದ ಪರಿವ

ಕುಳಿತಲ್ಲೇ ತಿಳಿಯುವ ಕಾತುರ

ಜಗದ ಆಗುಹೋಗುಗಳ ವಿಚಾರವ


ಹಿಡಿದೊಡನೆ ಸೆಳೆಯುವುದು

ತನ್ನೆಡೆಗೆ ಸಂಪೂರ್ಣ ಗಮನವ..

ಒಳಹೊಕ್ಕುತ್ತಿದ್ದಂತೆ ಮರೆಸುವುದು 

ಜೊತೆಗಿರುವವರ ಪರಿಚಯವ..


ಮಾತಿಲ್ಲದೆ ಕಳೆಯುತಿಹುರು

ಬಹುಪಾಲು ಮಂದಿ 

ಮಾತನಾಡಿಸಲು ಪ್ರಯತ್ನಿಸಿದವರಿಗೆ 

ಕೇಳುವರು "ಏನಂದಿ"?



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics