ಅಂತರಾತ್ಮ
ಅಂತರಾತ್ಮ
ಕಾಯಕ ಹಿಂಸೆಯ ನೋಡಲಾರೆ
ವಾಚಕ ಹಿಂಸೆಯನು ಆಡಲಾರೆ,
ಮಾನಸಿಕ ಹಿಂಸೆ ಬಗ್ಗೆ ಆಲಿಸಲಾರೆ
ಅಹಿಂಸೆಯ ತತ್ವ ಸೇರಲಿ ನನ್ನುಸಿರೆ!
ಅಂತರಾತ್ಮದಿ ಸೇರಿಹ ಹೇ ಗುರುವೆ
ಸದಾ ನನಗೊಲಿಯಲಿ ಈ ವರವೆ,
ಸತ್ಯ ಮಾರ್ಗದಿ ನಿತ್ಯ ನಾ ನಡೆವೆ
ಸರ್ವೇಜನ: ಸುಖಿನೋಭವ ಎನುವೆ!
ಹೊರಗಿನ ಹೊಗಳಿಕೆ ನನಗೆ ಬೇಕಿಲ್ಲ
ಅಂತ:ಸಾಕ್ಷಿಯ ನಿಲುವಿಗೆ ದೃಢವೆಲ್ಲ,
ಪೊಳ್ಳು ಆಕರ್ಷಣೆಗೆ ಮನ ಕರಗೋಲ್ಲ
ನೀ ನಡೆಸಿದಂತೆ ನಡೆವೆ ಜೀವನವೆಲ್ಲ!
