ಅನ್ನದಾತ ಜೀವದಾತ
ಅನ್ನದಾತ ಜೀವದಾತ
ಕೋಳಿ ಕೂಗುವ ಮೊದಲೇ ದಿನವಾರಂಭಿಸಿ
ನೇಗಿಲ ಹೊತ್ತು ಹೊಲಕ್ಕೆ ಪಯಣ ಬೆಳೆಸಿ
ಬೆಳೆದ ಬೆಳೆಯ ಲೋಕಕ್ಕೆ ಉಣಬಡಿಸುವಾತ
ನಮ್ಮ ಹೊಟ್ಟೆ ತಣಿಸುವ ಜೀವದಾತ
ಮಳೆ, ಬಿಸಿಲು, ಚಳಿಯೇ ಇರಲಿ ಆತ ತನ್ನ ಕಾಯಕ ಮರೆಯನು
ಮೈ ಎಷ್ಟೇ ದಣಿದರೂ, ಬೆವರಿಳಿದರೂ ಛಲವ ಬಿಡನು
ಇವನೇ ನೋಡಿ ಕಣ್ಣಿಗೆ ಕಾಣುವ ದೇವರ ಸ್ವರೂಪ
ಇವನೇ ನೋಡಿ ಜಗದ ಭವ್ಯ ದಾರಿ ದೀಪ
ತಾನು ಹಸಿದರೂ ನಮ್ಮ ಹಸಿವ ಕಾಯುವ ದೇವ
ಪೊರೆಯುವ, ಸಲಹುವ, ನಮ್ಮೆಲ್ಲರ ಜೀವ
ತಿಳಿಯೋಣ ಅರಿಯೋಣ ಅನ್ನದಾತನ ನೋವ
ಒರೆಸೋಣ ಅವನ ಕಣ್ಣೀರ ಹನಿಯ...
