STORYMIRROR

manjula g s

Abstract Inspirational Others

4  

manjula g s

Abstract Inspirational Others

ಅಮ್ಮಾ ನಿನ್ನ ಕೈಯಲ್ಲಿ

ಅಮ್ಮಾ ನಿನ್ನ ಕೈಯಲ್ಲಿ

1 min
258


ಅಮ್ಮ ನಾನಿದ್ದಾಗ ನಿನ್ನ ಕಾತರದ ಗರ್ಭದಲಿ

ಮೊದಲ ಸ್ಪರ್ಶವಾದದ್ದು ಈ ಕೈಯಿಂದಲೇ..! 


ನನ್ನ ಉಸಿರಾಟದ ಕುರುಹಿನ ದನಿಯಲಿ

ಬಿಗಿದ ಮುಷ್ಟಿ ಸಡಿಲವಾದದ್ದು ಈ ಕೈಯಲೇ! 


ದಿನ ದಿನ ನನ್ನ ಶರೀರದ ಅವಯವಗಳ 

ತಿದ್ದಿ ತಿಡಿ ಆಕಾರ ತರುತ್ತಿರುವುದು ಈ ಕೈಯಲೇ! 


ಬಟ್ಟೆ ಬರೆ ತೊಡಿಸಿ ಒಪ್ಪವಾಗಿ ಕೂದಲುಗಳ

ಮಣಿಸಿ ಅಂದಗೊಳಿಸುತ್ತಿರುವುದು ಈ ಕೈಯಲ್ಲೇ! 


ಆಡಿ ಬಂದಾಗ ಅಂಗಾಲು ತೊಳೆಸಿ ಮುದ್ದಿಸಿ

ಆರೈಕೆ ಮಾಡಿ ಜೋಗುಳ ತಟ್ಟುವುದು ಈ ಕೈಯಲ್ಲೇ! 


ನನ್ನ ಪ್ರತಿ ಗೆಲುವಿಗೆ ಚಪ್ಪಾಳೆ ತಟ್ಟಲು ಕಾದು

ಹಾಗೆಯೇ ಸೋತಾಗ ಸಾಂತ್ವನವೂ ಈ ಕೈಯಲೇ...! 


ಅಮ್ಮ ನಿನ್ನ ಕೈಯಲ್ಲಿ ನನ್ನ ಎಲ್ಲಾ ಬಾಳಿದೆ;

ನಾ ಕೊಡುವ ಭಾಷೆಯಲ್ಲಿ ನಿನ್ನ ಕನಸಿನ ಗೆಲುವಿದೆ! 


Rate this content
Log in

Similar kannada poem from Abstract