STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಅಜ್ಞಾತ

ಅಜ್ಞಾತ

1 min
387

ಹೂತು ಹೋದವು ಹಲವು ಭಾವಗಳು

ಹೇಳಿಕೊಳ್ಳಲಾಗದ ನೂರು ನೋವುಗಳು 

ಹೃದಯ ಗರ್ಭದೊಳಗೆ ಹುದುಗಿ ಕುಳಿತು

ಹೊರಗೆ ಬರಲಾರದೆ ಭಯದಿಂದ ಬಳಲಿ


ದಾಂಪತ್ಯ ಗೀತೆಯ ನೂರು ಅಪಸ್ವರಗಳು

ಕೋಪ ತಾಪಗಳ ಹಸಿ ಬಿಸಿಯುಸಿರುಗಳು

ಪಾಪ ಪ್ರಜ್ಞೆಯ ಪಶ್ಚಾತ್ತಾಪದ ಭಾವಗಳು

ಕೂಪದೊಳಡಗಿ ಹೋದವು ಅಜ್ಞಾತವಾಗಿ


ಸಂಸಾರದ ಸಾವಿರ ಸಾವಿರ ನೋವುಗಳು

ಬಿಸಿ ತುಪ್ಪವಾಗಿ ಕಾಡಿ ನಾಲಿಗೆಯ ಸುಟ್ಟು

ಕಸಿವಿಸಿಗೊಳಿಸಿದ ಬದುಕಿನ ಭಾವಗಳು

ಮಿಸುಕಾಡುತ ಮನದೊಳಗೆ ಅಡಗಿದವು


ಬೆಲೆ ಸಿಗದ ಹಲವು ನವಿರಾದ ಭಾವಗಳು

ಅಲೆದಲೆದಾಡುತ್ತಾ ಮನದ ಒಳಗೊಳಗೇ 

ಸುಳಿಸುಳಿದು ಸುತ್ತಾಡಿ ಹೊರ ಬರಲಾಗದೇ

ಬಳಲಿ ಬೆಂಡಾಗಿ ಹೂತು ಹೋದವು ಒಳಗೇ 


Rate this content
Log in

Similar kannada poem from Abstract