STORYMIRROR

Vijaya Bharathi

Abstract Classics Others

2  

Vijaya Bharathi

Abstract Classics Others

ಅಹಲ್ಯೆ

ಅಹಲ್ಯೆ

1 min
158

ಸೃಷ್ಟಿ ಕರ್ತ ನ ಸುರಸುಂದರಿ

ಪ್ರಾತ: ಸ್ಮರಣೀಯ ಪತಿವ್ರತೆ

ನಿನಗೆಂತಹ ಕ್ರೂರ ಶಿಕ್ಷೆ?


ಕಲ್ಲು ಮನದ ಮಹಾ ಪತಿ

ಕಲ್ಲಾಗು ಎಂದಿತ್ತ ಆ ಶಾಪ

ನಿನ್ನದಾವ ತಪ್ಪಿಗೆ ಓ ಅಹಲ್ಯೆ?


ಇಂದ್ರಜಾಲದ ಬಲೆಯೊಳು

ಸಿಲುಕಿ ಮೋಸ ಹೋದ 

ನೀನು ಅಪರಾಧಿ ಹೇಗಾದೆ?


ಪತಿ ಶಾಪದ ಫಲ ಫಲಿಸೆ

ಶಿಲೆಯೊಳಗೆ ಅಡಗಿ ಕುಳಿತ

ನಿನ್ನ ರೂಪಕೆ ಎಂತಹ ಗತಿ?


ಯಾರದೋ ಮೋಸಜಾಲ

ಇನ್ಯಾರದೋ ಬಲಿದಾನ

ಇದು ಯಾವ ನ್ಯಾಯ?


ಕಲ್ಲು ಮನಸಿನ ಗೌತಮ

ಸತಿಯ ಶಿಲೆಯಾಗಿಸಿದ

ಆ ಪತಿಯದದೆಂತಹ ಕಾಠಿಣ್ಯ?


ತನ್ನ ಚರಣಸ್ಪರ್ಶ ಮಾತ್ರದಿ

ಶಿಲೆಯ ಸ್ತ್ರೀ ಯನ್ನಾಗಿಸಿದ

ಶ್ರೀರಾಮನದದೆಂತಹ ಕಾರುಣ್ಯ?


ಶಿಲೆಯಾದ ಓ ಶಿಲಾತಪಸ್ವಿನಿ

ಯುಗ ಯುಗಗಳೇ ಕಳೆದರೂ 

ಜನಮನದ ಧ್ರುವತಾರೆ ನೀನಲ್ಲವೆ?



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract