1. ಹಳದಿ ಬಣ್ಣ
1. ಹಳದಿ ಬಣ್ಣ
ಜಗವ ತುಂಬಿದ
ಬಣ್ಣ ನೋಡಲು
ಕಣ್ಣುಗಳೆರಡು
ಸಾಲದೆಮಗೆ॥
ಹಳದಿ ಬಣ್ಣವು
ಕಣ್ಣ ತುಂಬುತ
ಮನಕೆ ಇಳಿದು
ಮುದವ ನೀಡಿದೆ॥
ಶುದ್ಧ ಅರಿಶಿಣ
ಜೊತೆಗೆ ಕುಂಕುಮ
ಹೆಣ್ಣಿನ ಬಾಳಿಗೆ
ಸೌಭಾಗ್ಯವಿದು ॥
ಲೋಹ ರಾಣಿ
ಎನಿಸಿ ಮೆರೆವ
ಚಿನ್ನ ಬಹಳ
ಬೆಲೆಯದು॥
ಹಳದಿ ಎಲೆಯು
ತಾನು ಉದುರಿ
ದಾರಿ ಕೊಡುವುದು
ಬೆಳೆವ ಚಿಗುರಿಗೆ॥
