STORYMIRROR

shristi Jat

Classics Inspirational Others

3  

shristi Jat

Classics Inspirational Others

ಸ್ನೇಹಿತ

ಸ್ನೇಹಿತ

1 min
130

ಸ್ನೇಹ ಅನ್ನೊದು ನಮ್ಮ ಜೀವನದಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ."ಗುಣ ನೋಡಿ ಗೆಳೆತನ ಮಾಡು"ಎಂಬ ನಾನ್ನುಡಿ ಗಾದೆಮಾತು ತುಂಬಾ ಅರ್ಥಗರ್ಭಿತವಾಗಿ ನಮ್ಮ ಹಿರಿಯರು ಹೇಳಿದ್ದಾರೆ.ಸ್ನೇಹಿತನ ಗುಣ ಮುಖ್ಯವಾಗುತ್ತದೆ.ಯಾಕೆಂದರೆ ನಾವು ರಕ್ತಸಂಭಂದಗಳಿಗಿಂತ ಹೆಚ್ಚು ಸಮಯ ಅವರ ಜೊತೆ ಕಳೆಯುತ್ತೇವೆ.ಎಲ್ಲಾ ವಿಷಯಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತೇವೆ.ಒಳ್ಳೆಯ ಸ್ನೇಹಿತನೊಂದಿಗೆ ನಮ್ಮ ಸಹವಾಸವಿದ್ದಲ್ಲಿ ಅವನು ನಮಗೆ ಸ್ಪೂರ್ತಿ ಆಗುತ್ತಾನೆ.ಕೆಟ್ಟ ಸ್ನೇಹಿತನ ಸಹವಾಸದಿಂದ ನಮ್ಮ ಜೀವನ ಹಾಳಾಗುತ್ತದೆ.ಅಂತಹ ಸ್ನೇಹದಿಂದ ದೂರವಿರಬೇಕು "ದುಷ್ಟರಿಂದ ದೂರವಿರಿ" ಎಂಬಂತೆ ಒಳ್ಳೆಯ ಸ್ನೇಹಿತನು ನಮ್ಮ ಕಷ್ಟದ ಕಾಲದಲ್ಲಿ ಕೈ ಹಿಡಿವನು.ಕೆಲವೊಂದು ಸಲ ರಕ್ತ ಸಂಬಂಧಗಳು ನಮಗೆ ಸಹಾಯ ಮಾಡುವದಿಲ್ಲ.ಆದರೆ ಸ್ನೇಹಿತರು ಸಹಾಯ ಮಾಡುತ್ತಾರೆ.ನಮಗೆ ತೋಚದ ವಿಷಯಗಳಿಗೆ ಸ್ನೇಹಿತರು ಸರಿಯಾದ ಮಾರ್ಗ ಸೂಚಿಸುತ್ತಾರೆ.ತಂದೆ ತಾಯಿಗಳ ಜೊತೆ ಹಂಚಿಕೊಳ್ಳಲಾಗದ ಕೆಲವು ವಿಷಯ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ.ಸ್ನೇಹ ಒಂದು ಪವಿತ್ರ ಭಂದನ ಕೇವಲ ನಮ್ಮ ವಯಸ್ಸಿನವರ ಜೊತೆ ಮಾಡುವುದಲ್ಲ ಕೆಲವರು ಅವರ ತಂದೆ ತಾಯಿಯನ್ನೆ ಸ್ನೇಹಿತರನ್ನಾಗಿ ಮಾಡಿಕೊಂಡಿರುತ್ತಾರೆ. ಕೆಲವರು ಒಡಹಟ್ಟಿದವರ ಜೊತೆ ಹಾಗೂ ಇನ್ನಿತರ ಯಾಕೆಂದರೆ ಸ್ನೇಹಕ್ಕೆ ಬೇಕಾಗಿರುವುದು ನಂಬಿಕೆ ನಮ್ಮ ಸುಖದುಃಖಗಳನ್ನು ಸ್ಪಂದಿಸುವವರು ಸ್ನೇಹಿತರಾಗುತ್ತಾರೆ.ಅವರೂ ಹಿರಿಯರಿಗೆ ಇರಲಿ ಹಾಗೂ ಕಿರಿಯರೆ ಇರಲಿ.

"ಒಳ್ಳೆಯ ಸ್ನೇಹ ನಮಗೆ ಕನ್ನಡಿ ಇದ್ದಂತೆ"


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Classics